ಮಂಗಳೂರು, ಸೌಜನ್ಯ ಪ್ರಕರಣದಲ್ಲಿ ಈಗಾಗಲೇ ಲೋಪ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹನ್ನೊಂದು ವರ್ಷದ ಹಿಂದಿನ ಪ್ರಕರಣದಲ್ಲಿ ನ್ಯಾಯ ಮರೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮರು ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಗೊಳಿಸಬೇಕು. ಹಾಗೂ ನೈಜ ಆರೋಪಿಗಳನ್ನು ಬಂಧಿಸಬೇಕು. ಹಾಗೂ ಅಮಾಯಕ ಹೆಣ್ಣು ಸೌಜನ್ಯಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಕರಾವಳಿ ಮಾತ್ರವಲ್ಲದೆ ಎಲ್ಲೆಡೆ ತೀವ್ರ ಹೋರಾಟ ನಡೆಯುತ್ತಿದೆ.

ಪ್ರಸ್ತುತ ಮಹೇಶ್ ಶೆಟ್ಟಿ ಮುನ್ನಲೆಯಲ್ಲಿದ್ದು, ಜನಬೆಂಬಲ ಅಪಾರವಾಗಿದೆ. ಮರು ತನಿಖೆ ನಡೆಸಲು ಏಕಾಏಕಿ ಕೋರ್ಟ್ ಗೆ ತೆರಳಿದ್ದಲ್ಲಿ ಜನಸಾಮಾನ್ಯರಿಗೆ ಯಾವುದೇ ವಿಚಾರಧಾರೆಗಳು ಗೊತ್ತಾಗುವುದಿಲ್ಲ. ಅದರ ಬದಲು ಮೊದಲ ಹಂತದಲ್ಲಿ ಜನಜಾಗೃತಿ ಹಾಗೂ ಜನಬೆಂಬಲ ಪಡೆಯಲು ಸೌಜನ್ಯ ಪರ ಹೋರಾಟಗಾರರು ಶತ ಪ್ರಯತ್ನದಲ್ಲಿದ್ದಾರೆ. ಈ ಹೋರಾಟದಲ್ಲಿ ನಿರ್ಭೀತಿಯಿಂದ ಯಾರಿಗೂ ಅಂಜದೆ ಯಾವುದಕ್ಕೂ ಜಗ್ಗದೆ ಮಹೇಶ್ ಶೆಟ್ಟಿ ತಿಮರೋಡಿ ಮುನ್ನುಗುತ್ತಿದ್ದು, ಕೆಲವು ವ್ಯಕ್ತಿಗಳಲ್ಲಿ ನಡುಕ ತರಿಸಿದೆ. ಈಗಾಗಲೇ ಕೋರ್ಟ್ ಮೂಲಕ ಈ ವ್ಯಕ್ತಿಯನ್ನು ಕಡಿವಾಣ ಹಾಕೋದಕ್ಕೆ ಪ್ರಯತ್ನಪಡಲಾಗಿದೆ. ಆದರೂ ಜನಬಲದಿಂದಾಗಿ ಎಲ್ಲೆಲ್ಲೂ ತಿಮರೋಡಿ ಧ್ವನಿ ಮಾರ್ದನಿಸುತ್ತಿದೆ. ಜನಬೆಂಬಲ ಗಮನಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರಲ್ಲಿ ಇದೀಗ ಭಯ ಶುರುವಾಗಿದೆ. ತಿಮರೋಡಿ ಹೋರಾಟ ಮಾಜಿ ಸಚಿವರಿಗೆ ಭಯಹುಟ್ಟಿಸಿದ್ದು, ತಿಮರೋಡಿಯವರ ಮಾತಿನ ಬಾಣಕ್ಕೆ ಕಡಿವಾಣ ಹಾಕುವಂತೆ ದ.ಕ. ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಎಲ್ಲರ ವಿರುದ್ಧ ಏಕವಚನದಿಂದಲೇ ಮಹೇಶ್ ಶೆಟ್ಟಿ ಗುಡುಗುತ್ತಿದ್ದಾರೆ. ಅವರ ಮಾತಿನ ವೇಗಕ್ಕೆ ಅಂಕುಶಹಾಕಬೇಕು. ಇನ್ನೊಂದೆಡೆ ಹೈಕೋರ್ಟ್ ಆದೇಶ ನೀಡಿದ್ದು, ಆ ಆದೇಶವನ್ನು ಪಾಲಿಸುವಂತೆ ತಪ್ಪಿದ್ದಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!