ಸೌಜನ್ಯಳಿಗೆ ನ್ಯಾಯಕ್ಕಾಗಿ ಹೋರಾಟದ ಕಾವು ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯ ಮಾತ್ರವಲ್ಲದೇ ಹೊರರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿದ್ದು, ನೈಜ ಆರೋಪಿಗಳನ್ನು ಬಂಧಿಸಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಗೃಹಸಚಿವರು ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಸೌಜನ್ಯ ಕೇಸ್ ಮುಗಿದ ಅಧ್ಯಾಯವೆಂದು ಹೇಳಿದ್ದು, ಸೌಜನ್ಯ ಪರ ಹೋರಾಟಗಾರರಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.

ಧಾರವಾಡದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಮಾತನಾಡುತ್ತಾ,” ಸೌಜನ್ಯ ಕೇಸ್ ಮುಗಿದ ಅಧ್ಯಾಯವಾಗಿದೆ. ಕಾನೂನಾತ್ಮಕವಾಗಿ ಆ ಕೇಸ್ ಮುಗಿದು ಹೋಗಿದೆ. ಜನರ ಆಗ್ರಹದಲ್ಲಿ ಜನರ ಪರ ವಿರೋಧ ಇದ್ದೇ ಇರುತ್ತದೆ. ಅದಕ್ಕೆ ಏನು ಮಾಡಲು ಬರೋದಿಲ್ಲ ಎಂದಿದ್ದಾರೆ. ಕೆಲವರು ಕೇಸ್ ಮಾಡಲು ಒತ್ತಾಯಿಸುತ್ತಾರೆ. ಸದ್ಯ ಕೇಸ್ ರೀ-ಓಪನ್ ಮಾಡಲು ಆಗೋದಿಲ್ಲ”ಎಂದು ಸಚಿವರು ಹೇಳಿದ್ದಾ

ಪೊಲೀಸರು ಆರೋಪಿಯೆಂದು ಬಿಂಬಿಸಿದವ ನೈಜ ಆರೋಪಿ ಅಲ್ಲವೆಂದು ಕೋರ್ಟ್ ಹೇಳಿದೆ. ಮೇಲೆಯೂ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಮೃತ ಬಾಲಕಿಗೆ ನ್ಯಾಯ ಒದಗಿಸಲು ಹಿಂದೆ ಮುಂದೆ ನೋಡಿ , “ಅದು ಮುಗಿದ ಅಧ್ಯಾಯವೆಂದು ಹೇಳುತ್ತೀರಿಯಲ್ಲ ನಿಮಗೆ ನಾಚಿಕೆ ಮಾನ ಮರ್ಯಾದೆ, ಕಾನೂನಿನ ಮೇಲೆ ಏನು ಗೌರವ ಹೇಳುವುದು ಇಲ್ಲವೇ?” ಎಂದು ಸೌಜನ್ಯ ಪರ ಹೋರಾಟಗಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!