ಫಾತಿಮಾ ಮಾತೆಯ ದೇವಾಲಯ ಪೆರುವಾಯಿಯಲ್ಲಿ ಕಥೊಲಿಕ್ ಸಭಾ ಪೆರುವಾಯಿ ಹಾಗೂ ಸ್ತ್ರಿ ಸಂಘಟನೆಯ ವತಿಯಿಂದ ಆಟಿ ತಿಂಡಿ ತಿನಸುಗಳ ಸಂಭ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಂದನೀಯ ಸ್ವಾಮಿ ಸೈಮನ್ ಡಿಸೋಜಾ, ಧರ್ಮಗುರುಗಳು ಫಾತಿಮಾ ಮಾತೆಯ ದೇವಾಲಯ ಪೆರುವಾಯಿ, ಶ್ರೀಮತಿ ನಳಿನಾಕ್ಷಿ ಉದಯಾ ರಾಜ್ ನಿವೃತ್ತ ಉಪನ್ಯಾಸಕಿ, ಲೇಖಕಿ ಹಾಗೂ ಅಂಕಣಕಾರ್ತಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಥೊಲಿಕ್ ಸಭಾ ಪೆರುವಾಯಿ ಇದರ ಅಧ್ಯಕ್ಷರಾದ ಶ್ರೀ ರಾಲ್ಫ್ ಡಿಸೋಜಾರವರು ಆಟಿ ಸಂಭ್ರಮದ ತಿಂಡಿತಿನಸುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಂದನೀಯ ಸ್ವಾಮಿ ಸೈಮನ್ ಡಿಸೋಜಾ ಅವರು ಈ ಸಂಪ್ರದಾಯವನ್ನು ಹೆಚ್ಚಿನ ರೀತಿಯಲ್ಲಿ ಜನರಲ್ಲಿ ಬೆಳಗಬೇಕು ಮತ್ತು ಜಾಗೃತಿ ಮೂಡಿಸಬೇಕೆಂದು ಜನರಲ್ಲಿ ಅಸಕ್ತಿ ತುಂಬಿದರು.

ಶ್ರೀಮತಿ ನಳಿನಾಕ್ಷಿ ಉದಯಾ ರಾಜ್ ರಿವರು ಪುರಾತನ ಆಹಾರ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕ ಆಹಾರ ಮತ್ತು ಒಳ್ಳೆಯ ಔಷಧಿ ಬರಿತವಾದ ತಿನಸುಗಳು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಸ್ತ್ರೀ ಸಂಘಟನೆಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಬಗೆಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ತಂದು ಅದರ ಸವಿರುಚಿಯನ್ನು ಎಲ್ಲರೊಂದಿಗೆ ಹಂಚಿದರು.

ಈ ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ಡೇನಿಸ್ ಮೊಂತೆರೋ, ಕಾರ್ಯದರ್ಶಿ ಶ್ರೀಮತಿ ವೈಲೆಟ್ ಕುವೆಲ್ಲೋ ಹಾಗೂ ಪೆರುವಾಯಿ ಸ್ತ್ರೀ ಸಂಘಟನೆ ಅಧ್ಯಕ್ಷಿಣಿ ಶ್ರೀಮತಿ ವೀಣಾ ಮೊಂತೆರೋ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಮಾರಿ ದೀಕ್ಷಿತಾ ಡಿಸೋಜ ಎಲ್ಲರನ್ನು ಸ್ವಾಗತಿಸಿದರು ಶ್ರೀಮತಿ ವೈಲೆಟ್ ಕುವೆಲ್ಲೊ ವಂದಾನಾರ್ಪಣೆ ಮಾಡಿದರು ಲ್ಯಾನ್ವಿನ್ ಡಿಸೋಜ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

By admin

Leave a Reply

Your email address will not be published. Required fields are marked *

error: Content is protected !!