ಮಂಗಳೂರು :: ಬೀದಿ ನಾಟಕ ಕಲಾವಿದನೂಬ್ಬ ತಾನೂ ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ(19ವ)ಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯ ಖಾಸಗಿ ಪೋಟೊಗಳನ್ನು ವೈರಲ್ ಮಾಡಿದ ಘಟನೆಯೊಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ಸಂತ್ರಸ್ಥೆ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ರಾಯಚೂರು ಮೂಲದ ಯಮನೂರ(22) ಪ್ರಕರಣದ ಆರೋಪಿ. ಈತ ಬೀದಿ ನಾಟಕ ಕಲಾವಿದನಾಗಿದ್ದು, ಹೀಗಾಗಿ ಈತನ ಬಳಿ ಪೊಲೀಸ್ ಸಮವಸ್ತ್ರವಿತ್ತು. ಇದನ್ನು ಧರಿಸಿ ತಾನು ಪೊಲೀಸ್ ಅಧಿಕಾರಿಯೆಂದು ಯುವತಿಯನ್ನು ನಂಬಿಸುವಲ್ಲಿ ಸಫಲನಾಗಿದ್ದಾನೆ. ವಿದ್ಯಾರ್ಥಿನಿಗೆ ಇನ್ ಸ್ಟಾಗ್ರಾಂ ಮುಖಾಂತರ ಆರೋಪಿಯ ಪರಿಚಯವಾಗಿದೆ.
ಆರೋಪಿಯು ತಾನು ವಾಮಂಜೂರು ಸ್ಟೇಷನ್ ನಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿದ್ದಾನೆ. ಸಂತ್ರಸ್ತೆಯ ಮನೆಯವರಿಗೆ ಕೆಲಸ ಕೊಡಿಸುವುದಾಗಿ ದಾಖಲಾತಿಗಳನ್ನು ಪಡೆದುಕೊಂಡಿದ್ದಾನೆ.

2023 ಮೇ ತಿಂಗಳಲ್ಲಿ ಆಕೆಯನ್ನು ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ, ಬಳಿಕ ಅದೇ ವಾರದಲ್ಲಿ ತಣ್ಣೀರು ಬಾವಿ ಬೀಚ್ ಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯೊಂದಿಗೆ ಫೋಟೋ ತೆಗೆದಿದ್ದಾನೆ. ಬಳಿಕ ಆ ಫೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸಿ ವಿದ್ಯಾರ್ಥಿನಿಯನ್ನು ಬೆಂಗಳೂರು ಸಮೀಪದ ನೆಲಮಂಗಲದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ. ಆಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ.

ಬಳಿಕ ಮೂಲ್ಕಿ ಕಿನ್ನಿಗೋಳಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಸಂತ್ರಸ್ತ ವಿದ್ಯಾರ್ಥಿನಿಯ ನಗ್ನ ಫೋಟೋಗಳನ್ನು ಆಕೆಯ ಮನೆಯವರ ಮತ್ತು ಸ್ನೇಹಿತರ ಮೊಬೈಲ್ ಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುತ್ತಾನೆ.

ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾದರೆ ರೂ.1,50,000/- ನೀಡಬೇಕೆಂದು ಡಿಮ್ಯಾಂಡ್ ಮಾಡಿರುತ್ತಾನೆಂದು ಯುವತಿ ದೂರು ನೀಡಿದ್ದಾಳೆ.

ಮಂಗಳೂರು ಮಹಿಳಾ ಠಾಣೆಯಲ್ಲಿ IPC ಕಲಂ: 354(ಡಿ), 376, 384, 506, 170 ಮತ್ತು ಕಲಂ: 67 (ಎ) ಐ.ಟಿ. ಆಕ್ಟ್ ನಂತೆ ಈ ಕುರಿತು ಕೇಸು ದಾಖಲಾಗಿರುತ್ತದೆ.

ಆ.9ರಂದು ಆರೋಪಿ ಯಮನೂರನನ್ನು ಮಂಗಳೂರು ನಗರದಲ್ಲಿ ದಸ್ತಗಿರಿ ಮಾಡಿದ ಪಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

By admin

Leave a Reply

Your email address will not be published. Required fields are marked *

error: Content is protected !!