ಮೂರು ದಿನಗಳ ಹಿಂದೆ ಮಡಿಕೇರಿಯಿಂದ ನಾಪತ್ತೆಯಾದ ಇಬ್ಬರು ಬಾಲಕಿಯ ಪೈಕಿ ಓರ್ವ ಬಾಲಕಿ ಮಲ್ಪೆ ಬೀಚ್ ನಲ್ಲಿ ಸಮುದ್ರಲ್ಲಿ ಮುಳುಗಿ ಮೃತಪಟ್ಟಿದ್ದು ಮತ್ತೋರ್ವ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.

ಮೃತರನ್ನು ಮಡಿಕೇರಿ ನಿವಾಸಿ ಮಾನ್ಯ(16) ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಆಕೆಯ ಗೆಳತಿ ಯಶಸ್ವಿನಿ(16) ಎಂಬವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕಿಯರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಮಂಗಳೂರು ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಪಣಂಬೂರು ಬೀಚ್ ನಲ್ಲಿ ಆಟವಾಡಿ ಬಳಿಕ ಬಸ್ ಹತ್ತಿಕೊಂಡು ಮುಸ್ಸಂಜೆ ವೇಳೆ ಮಲ್ಪೆ ಬೀಚಿಗೆ ಬಂದಿದ್ದಾರೆ. ಶನಿವಾರ ರಾತ್ರಿ 8:30ರ ವೇಳೆ ಮಲ್ಪೆ ಬೀಚಿನ ಸಮುದ್ರದಲ್ಲಿ ಆಟ ಆಡುತ್ತಿದ್ದ ವೇಳೆ ಅಬ್ಬರದ ಅಲೆಗಳಿಗೆ ಹೊಡೆತಕ್ಕೆ ಸಿಲುಕಿ ಇವರಿಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಎನ್ನಲಾಗಿದೆ.

ಬಾಲಕಿಯರನ್ನು ಮುಳುಗುತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿ ತೀರಕ್ಕೆ ತಂದಿದ್ದಾರೆ. ಈ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಾನ್ಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಯಶಸ್ವಿನಿ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ ಈ ಬಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!