ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡಿದ ಭೀಕರ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಮತ್ತೊರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಭಾರತ ದೇಶದಲ್ಲಿ ಮಹಿಳೆಯರನ್ನು ವಿಶೇಷ ಗೌರವದಿಂದ ಕಾಣುವ ನಮ್ಮವರು ಅದೇ ಮಣಿಪುರದಲ್ಲಿ ಮಹಿಳೆಯರನ್ನು ನಗ್ನ ಮೆರಾವಣಿಗೆ ಮಾಡುವ ವೇಳೆ ಮೌನವಾಗಿದ್ದಾರೆ. ಇದುವೇ ದೇಶದಲ್ಲಿನ ಭೇಟಿ ಬಚಾಚೋ, ಬೇಟಿ ಪಡಾವೋ ? ಎಂಬುವುದು ಆಕ್ರೋಶಿತರ ನುಡಿ. ಕೇಂದ್ರ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಣಿಪುರದಲ್ಲಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಕಾನೂನು ಆಡಳಿತವನ್ನು ಮೀರಿದ ಮಾನವಿಯತೆ ಮರೆತವರನ್ನು ರಾಜಾತಿತ್ಯದಲ್ಲಿ ಸೆರೆಯೊಳಗಿಡುವ ಬದಲು ಅದೇ ರೀತಿಯಲ್ಲಿ ಶಿಕ್ಷೆ ನೀಡುವುದು ಒಲಿತು. ದೇಶದ ಸೈದ್ದಾಂತಿಕತೆ ಉಳಿವಿಗೆ ಇಂತಹ ನಿರ್ಧಾರಗಳನ್ನು ಕೆಲವೊಮ್ಮೆ ಕೈಗೊಳ್ಳಲೇಬೇಕು.

ಇನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದಾದ ಶಂಕಿತರನ್ನು ಪತ್ತೆಹಚ್ಚಲು ಪೊಲೀಸರ ಬೇಟೆ ಮುಂದುವರೆದಿದೆ.ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಹುಯಿರೆಮ್ ಹೆರೋಡಾಸ್ ಮೈತೆ ಸೇರಿದಂತೆ ನಾಲ್ವರನ್ನು ನಿನ್ನೆ ಬಂಧಿಸಲಾಗಿತ್ತು

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಶೋಧ ಕಾರ್ಯಾಚರಣೆಯನ್ನು ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ವದಂತಿಗಳನ್ನು ನಂಬಬೇಡಿ ಎಂದು ರಾಜ್ಯ ಸರ್ಕಾರ ಜನರಲ್ಲಿ ಮನವಿ ಮಾಡಿದೆ. “ಆಧಾರವಿಲ್ಲದ” ವೀಡಿಯೊಗಳ ಪ್ರಸಾರವನ್ನು ದೃಢೀಕರಿಸಲು ಜನರಿಗೆ ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಲೂಟಿ ಮಾಡಿದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೊಲೀಸರು ಅಥವಾ ಹತ್ತಿರದ ಭದ್ರತಾ ಪಡೆಗಳಿಗೆ ಹಿಂದಿರುಗಿಸುವಂತೆ ಸರ್ಕಾರ ಜನರಿಗೆ ಮನವಿ ಮಾಡಿದೆ

By admin

Leave a Reply

Your email address will not be published. Required fields are marked *

error: Content is protected !!