ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜನೆ ಮಾಡಿರುವ ರಾಜ್ಯಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಭಾನುವಾರದಂದು ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ನಡೆಯಿತು. ಎಂಪವರ್ಡ್ ಮೈಂಡ್ಸ್ ಎಡು ಸೊಲ್ಯೂಷನ್ಸ್ ಎಲ್ ಎಲ್ ಪಿ ಸಂಸ್ಥೆಯ ಸಂಸ್ಥಾಪಕರಾದ ಡಾ ಲತಾ ಮೂರ್ತಿ ಉದ್ಘಾಟನೆ ಮಾಡಿದರು.

ಯೂಸಫ್ ಹೆಚ್ ಬಿ ಕವಿಗಳು ಮತ್ತು ಚಿಂತಕರು ಬೆಂಗಳೂರು ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರೆ, ಡಾ. ಜ್ಯೋತಿ ಶ್ರೀನಿವಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೊಹಮ್ಮದ್ ಹುಮಾಯೂನ್ ಎನ್ ವಹಿಸಿದರು. ಮೈಬೂಬಸಾಹೇಬ.ವೈ‌.ಜೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಎಂ.ಎಂ ಭಾಷ ನಂದಿ, ಚಂದ್ರಶೇಖರ್ ಸಿ.ಎನ್ , ಬಿ.ಎನ್ ಸುರೇಶ್ ಬಾಬು, ರಮೇಶ್ ಹಂಜಿ, ಅಶ್ವಿನಿ ಎಸ್ ಅಂಗಡಿ , ಶ್ರೀಮತಿ ಆಶಾ ಶಿವು, ಶ್ರೀಮಂಜು ಟಿ, ಖಿದ್ಮಾ ಫೌಂಡೇಶನ್ ಅಧ್ಯಕ್ಷ ಹಾಶಿಂ ಬನ್ನೂರು ಹಾಗೂ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸೇವಾ ರತ್ನ ಪ್ರಶಸ್ತಿ, ಖಿದ್ಮಾ ಶಿಕ್ಷಕರತ್ನ ಪ್ರಶಸ್ತಿ ಹಾಗೂ ಖಿದ್ಮಾ ಕಾವ್ಯಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಮೂವತ್ತು ಕವಿಗಳು ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನವಾಚನ ಮಾಡಿದರು.ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಪೂಜಾ ಸಿ.ಐ ನಿರೂಪಿಸಿ, ಕುಮಾರಿ ಜ್ಯೋತಿ ಜಿ ಮೈಸೂರು ವಂದಿಸಿದರು.

By admin

Leave a Reply

Your email address will not be published. Required fields are marked *

error: Content is protected !!