ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ಕಂಪನಿಗೆ ನುಗ್ಗಿದ ದುಷ್ಕರ್ಮಿಗಳು ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಇಬ್ಬರನ್ನೂ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.

ಕೊಲೆಯಾದ ಮೃತ ದುರ್ದೈವಿಯನ್ನು ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್  ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನು ಕುಮಾರ್ ಕೊಲೆಯಾದ ದುರ್ದೈವಿಗಳು ಆಗಿದ್ದಾರೆ. ಬೆಂಗಳೂರಿನ ಅಮೃತಹಳ್ಳಿಯಲ್ಲಿ ಘಟನೆ ನಡೆದಿದೆ. ಇನ್ನು ಫೆಲಿಕ್ಸ್‌ ಎಂಬಾತನಿಂದ ಕೃತ್ಯ ನಡೆದಿದೆ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೆಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ತನ್ನ ಉದ್ಯಮಕ್ಕೆ ಅಡ್ಡಿಯಾಗಬಾರದೆಂದು ಕೊಲೆ: ಇನ್ನು ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗುತ್ತಿರುವ ಫೆಲಿಕ್ಸ್, ಏರೋನಿಕ್ಸ್ ಸಂಸ್ಥೆಯ ಹಳೆ ಉದ್ಯೋಗಿಯಾಗಿದ್ದನು. ಏರೋನಿಕ್ಸ್‌ ಕಂಪನಿಯನ್ನು ಬಿಟ್ಟುಹೋದ ನಂತರ ಆತನೇ ಸ್ವಂತ ಕಂಪನಿ ಸ್ಥಾಪಿಸಿದ್ದನು. ಆದರೆ, ತನ್ನ ಉದ್ಯಮಕ್ಕೆ ಪಣೀಂದ್ರ ಎದುರಾಳಿಯಾಗಿದ್ದ ಎಂದು ಭಾವಿಸಿದ್ದನು. ಇದರಿಂದಾಗಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್  ಫಣೀಂದ್ರ ಸುಬ್ರಮಣ್ಯ ಕೊಲೆಗೆ ಸಂಚು ರೂಪಿಸಿದ್ದನು. ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಏರೋನಿಕ್ಸ್‌ ಕಂಪನಿಗೆ ಎಂಟ್ರಿಕೊಟ್ಟ ಫೆನಿಕ್ಸ್‌ ತಲ್ವಾರ್ ಮತ್ತು ಚಾಕುವಿನಿಂದ ಪಣೀಂದ್ರ ಹಾಗೂ ವಿನುಕುಮಾರ್ ಮೇಲೆ ದಾಳಿ ಮಾಡಿದ್ದಾನೆ. ತನ್ನ ಸಂಚಿನಂತೆ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ.

ಇತ್ತೀಚೆಗೆ ಐಎಸ್‌ಪಿ ಪರವಾನಗಿ ಪಡೆದಿದ್ದ ಫಣೀಂದ್ರ ಸುಬ್ರಹ್ಮಣ್ಯ:  ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ( Aironics Media Pvt Ltd) ಡೈರೆಕ್ಟರ್  ಫಣೀಂದ್ರ ಸುಬ್ರಮಣ್ಯ ಅವರು ಕಳೆದ ತಿಂಗಳು (14-06-2023 ರಂದು)ಗೆ ಕರ್ನಾಟಕ ಸೇವಾ ಪ್ರದೇಶ (Karnataka LSA) ವತಿಯಿಂದ  UL-ವರ್ಗ ‘ಬಿ’ ಅಡಿಯಲ್ಲಿ 74ನೇ ಇಂಟರ್ನೆಟ್ ಸೇವೆ ಒದಗಿಸುವ (ISP) ಪರವಾನಗಿಯನ್ನು ಪಡೆದುಕೊಂಡಿದ್ದರು. ತಮ್ಮ ಟೆಲಿಕಾಂ ಉದ್ಯಮದಲ್ಲಿ ಎಲ್ಲಾ ಯಶಸ್ಸನ್ನು ಸಾಧಿಸಲೆಂದು ಹಾರೈಸಿತ್ತು. 

By admin

Leave a Reply

Your email address will not be published. Required fields are marked *

error: Content is protected !!