ಮಂಗಳೂರು: ಯುವಕ ನಿಗೂಢ ಮೃತ್ಯು; ಕೊಲೆ ಶಂಕೆ
ಮಂಗಳೂರು, ಜು.8: ಮುಳಿಹಿತ್ಲುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಶನಿವಾರ ವರದಿಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮುಳಿಹಿತ್ಲು ಜಂಕ್ಷನ್‌ನಲ್ಲಿರುವ ಜನರಲ್ ಸ್ಟೋರ್‌ನಲ್ಲಿ ಕೆಲಸಕ್ಕಿದ್ದ ಜಗ್ಗು (35) ನಿಗೂಢವಾಗಿ ಸಾವನ್ನಪ್ಪಿದ ಯುವಕ ಎಂದು ತಿಳಿದು ಬಂದಿದೆ.

ಜನರಲ್ ಸ್ಟೋರ್‌ಗೆ ಸೇರಿದ ಗೋದಾಮಿನಲ್ಲಿ ನಿನ್ನೆ ರಾತ್ರಿ ಮಲಗಿದ್ದ ಜಗ್ಗು ನಿಗೂಢವಾಗಿ ಸಾವನ್ನಪ್ಪಿದ್ದು, ಆತನನ್ನು ಹೊಡೆದು ಬೆಂಕಿ ಹಚ್ಚಿ ಕೊಲೆಗೈಯಲಾಗಿದೆ ಎಂಬ ಗುಮಾನಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸಾವಿಗೀಡಾದ ವ್ಯಕ್ತಿಯ ವಿವರ ಗೊತ್ತಾಗಿಲ್ಲ.

ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!