ಅಗತ್ಯವಾದಷ್ಟು ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಹಣ ನೀಡಲು ನಿರ್ಧರಿಸಿದ್ದೇವೆಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಕೆಜಿಗೆ 34 ರೂಪಾಯಿಯಂತೆ ಮನೆಯ ಸದಸ್ಯರಿಗೆ ತಲಾ 5 ಕೆಜಿಯಂತೆ ಲೆಕ್ಕ ಹಾಕಿ ಹಣ ನೀಡಲಾಗುತ್ತದೆ.ಒಬ್ಬರಿಗೆ 5 ಕೆಜಿಯ ಅಕ್ಕಿ ಮೌಲ್ಯವನ್ನು ಹಣಕ್ಕೆ ಬದಲಿಸಿ 170 ರೂ. ನೀಡುತ್ತೇವೆ. ಎಪಿಎಲ್ ಕಾರ್ಡುದಾರರಿಗೆ ಅಕ್ಕಿಯನ್ನೇ ಕೊಡುತ್ತೇವೆ. ಆದರೆ ಪ್ರತೀ ತಿಂಗಳು ಕೇಂದ್ರ ಕೊಡುತ್ತಿರುವ 5 ಕೆಜಿ ಅಕ್ಕಿ ಈ ಹಿಂದಿನಂತೆಯೇ ವಿತರಿಸಲಾಗುತ್ತದೆ ಎಂದಿದ್ದಾರೆ

ಈ ಯೋಜನೆಯು ಕೊಟ್ಟ ಮಾತಿನಂತೆ ಜುಲೈನಿಂದಲೇ ಜಾರಿಯಾಗಲಿದೆ . ಬಿಪಿಎಲ್ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಅಕ್ಕಿ ದಾಸ್ತಾನು ಆಗುವವರೆಗೆ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಮುನಿಯಪ್ಪ ಹೇಳಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!