ವಿಜಯಪುರ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡುವಷ್ವಟರ ಮಟ್ಟಿಗೆ ಸಂಸದ ಜಿಗಜಿಣಗಿ ಹಾಗೂ ಶಾಸಕ ಯತ್ನಾಳ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.

ಸೋಮವಾರ ನಗರದ ಲಿಂಗದಗುಡಿ ರಸ್ತೆಯಲ್ಲಿರುವ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಡೆದ ಕಾರ್ಯಕರ್ತರ ಗಲಾಟೆ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಗಣ್ಯರು ಮೂಕಪ್ರೇಕ್ಷಕರಾಗಿದ್ದರು. ಈ ಹಂತದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಿದರೂ, ಕಾರ್ಯಕರ್ತರ ಗಲಾಟೆ ನಿಯಂತ್ರಣಕ್ಕೆ ಬರಲಿಲ್ಲ. ಇದರಿಂದ ಬೇಸರಗೊಂಡ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಹಲವು ನಾಯಕರು ಸಭೆಯಿಂದ ಹೊರ ನಡೆದ ಘಟನೆ ಜರುಗಿದೆ.

ಮಹಾನಗರ ಪಾಲಿಕೆ ಸದಸ್ಯರು, ಯತ್ನಾಳ ಬರ ಬೆಂಬಲಿಗರು ಬಿಆರ್‍ಪಿ, ಬಿಆರ್‍ಪಿ ಎಂದು ಘೋಷಣೆ ಕೂಗಲಾರಂಭಿಸಿದರು. ಇದರಿಂದ ಸಭೆಯಲ್ಲಿ ಏಕಾಏಕಿ ಗದ್ದಲ ಆರಂಭಗೊಂಡು, ಪರಸ್ಪರ ಘೋಷಣೆ ಜೋರಾಗತೊಡಗಿತು. ಇಷ್ಟಾದರೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷರಾಗಿದ್ದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಸಂಸದ ರಮೇಶ ಜಿಗಜಿಣಗಿ ಅವರನ್ನು ನಾಲ್ಕನೇ ಬಾರಿಗೆ ಆಯ್ಕೆ ಮಾಡಿ ಸಂಸತ್‍ಗೆ ಕಳಿಸಬೇಕಿದೆ ಎಂದು ಮಾತು ಮಗಿಸುತ್ತಲೇ ಶಾಸಕ ಯತ್ನಾಳ ಪರ ಬೆಂಬಲಿಗರು ಘೋಷಣೆ ಕೂಗಲು ಆರಂಭಿಸಿದರು. ಆಗ ಭಾರಿ ಸಿಡುಕು ಹೊರ ಹಾಕುತ್ತಲೇ ಸಂಸದ ರಮೇಶ ಜಿಗಜಿಣಗಿ ಹೊರ ನಡೆದರೆ, ವೇದಿಕೆಯಲ್ಲಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ವಿಧಾನಸಭೆ ಸ್ಪರ್ಧಿಯಾಗಿದ್ದ ವಿಜುಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ರಮೆಶ ಜಿಗಜಿಒಣಗಿ ಅವರನ್ನು ಹಿಂಬಾಲಿಸಿದರು.

By admin

Leave a Reply

Your email address will not be published. Required fields are marked *

error: Content is protected !!