ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದ ಅಪ್ರಾಪ್ತ ಕುಸ್ತಿಪಟುವಿನ ತಂದೆ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾರೆ.

ಈ ಹಿಂದೆ ಬ್ರಿಜ್ ಭೂಷಣ್ ವಿರುದ್ಧ ಹೇಳಿಕೆ ನೀಡಿದ್ದ ಕುಸ್ತಿಪಟುವಿನ ತಂದೆ ಇದೀಗ ನನ್ನ ಮಗಳಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಹೇಳಿಕೆ ಬದಲಿಸಿದ್ದಾರೆ.

‘ನನ್ನ ಮಗಳ ಮೇಲೆ ತಾರತಮ್ಯ ತೋರಿಸಿದ್ದಕ್ಕಾಗಿ ಕುಸ್ತಿ ಒಕ್ಕೂಟದ ವಿರುದ್ಧ ನಾವು ಕೋಪಗೊಂಡಿದ್ದೆವು. ಹೀಗಾಗಿ, ನಾವು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಎತ್ತಿದ್ದೇವೆ ಎಂದರು.

ಇನ್ನು ನಾವು ಕೋಪದಿಂದ ಇಂತಹ ದೂರು ದಾಖಲಿಸಿದ್ದೇವೆ. ನಾನು ಮ್ಯಾಜಿಸ್ಟ್ರೇಟ್ ಮುಂದೆ ನನ್ನ ಹೇಳಿಕೆಯನ್ನು ಸರಿಪಡಿಸಿದ್ದೇನೆ. ನಾವು ಇದರಲ್ಲಿ ಒಬ್ಬಂಟಿಯಾಗಿದ್ದೇವೆ. ಹೋರಾಟ, ಕುಸ್ತಿಪಟುಗಳ ಸಂಘ ಕೂಡ ಮೊದಲಿಗೆ ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!