ಉಳ್ಳಾಲ: ಅಕಾಲಿಕವಾಗಿ ಮೃತರಾದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ 55 ವರ್ಷ ಪ್ರಾಯದ ಶರತ್ ಕಾಜವ ಅವರ ಅಂತಿಮ ಯಾತ್ರೆಯಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪಾಲ್ಗೊಂಡು ಶವಕ್ಕೆ ಹೆಗಲುಕೊಟ್ಟು ಮಾನವೀಯತೆ ಮೆರೆದರು.

ಮುಡಿಪು ಮಿತ್ತಕೋಡಿ ನಿವಾಸಿ ಶರತ್ ಕಾಜವ ನಿನ್ನೆ ನಸುಕಿನ ಜಾವ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕವಾಗಿ ಮೃತ ಪಟ್ಟಿದ್ದರು.

ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಶಾಸಕ ಹಾಗೂ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಪೂರ್ವ ನಿಗದಿ ಪಡಿಸಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮಿತ್ತಕೋಡಿಗೆ ದೌಡಾಯಿಸಿದ್ದರು.

ಅಲ್ಲಿ ಶರತ್‌ ಕಾಜವ ಅವರ ನಿವಾಸಕ್ಕೆ ತೆರಳಿ ಸಂಬಂಧಿಕರಲ್ಲಿ ಧೈರ್ಯ ತುಂಬಿದ ಅವರು ಬಳಿಕ ನಡೆದ ಅಂತಿಮಯಾತ್ರೆಗೆ ಹೆಗಲಾದರು.

ಕಾಂಗ್ರೆಸ್ ನ ಹಿರಿಯ ಮುತ್ಸದ್ದಿ ಜನಾರ್ದನ ಪೂಜಾರಿಯವರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಿದ ಶಾಸಕರು ಎಂಬ ಕೀರ್ತಿಗೆ ಯು.ಟಿ ಖಾದರ್ ಭಾಜನರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಶರತ್‌ ಕಾಜವ ಅವರು ನರಿಂಗಾನ ಕಂಬಳ ಸಮಿತಿಯ ಸದಸ್ಯರಾಗಿದ್ದರು.

ಸಹೋದರ ಪ್ರಶಾಂತ್ ಕಾಜವ ಅವರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾಗಿರುತ್ತಾರೆ.

ಶರತ್‌ ಅವರು ಪತ್ನಿ, ಪುತ್ರ ಮತ್ತು ಕುಟುಂಬದ ಸದಸ್ಯರನ್ನು ಅಗಲಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!