ಪೊಲೀಸ್‌ ದೌರ್ಜನ್ಯಕ್ಕೆ ತುತ್ತಾದ ಯುವಕರ ಆರೋಗ್ಯ ವಿಚಾರಿಸುವ ನೆಪದಲ್ಲಿ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್, ಪುತ್ತೂರಿಗೆ ಬಂದು ಹೋದ ಬಳಿಕ ದಕ್ಷಿಣ ಕನ್ನಡದ ಬಿಜೆಪಿ ಸ್ಥಿತಿ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಅದರಲ್ಲೂ ಪುತ್ತೂರು ಶಕ್ತಿ ಕೇಂದ್ರದಲ್ಲೇ ಕಮಲ ಪಕ್ಷ 3ನೇ ಸ್ಥಾನಕ್ಕೆ ಕುಸಿಯಲು ಕಾರಣರಾದ ಹಿಂದೂ ನಾಯಕ ಅರುಣ್ ಪುತ್ತಿಲರಿಗೆ ಬಿಜೆಪಿಯಲ್ಲಿ ಸ್ಥಾನಮಾನ ನೀಡುವ ವಿಚಾರವೂ ನಾಯಕತ್ವ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಗೊತ್ತಾಗಿದೆ.

ನಾನು ಹಿಂದೆಯೂ ಬಿಜೆಪಿ, ಈಗಲೂ ಬಿಜೆಪಿ. ಪಕ್ಷದ ಕಡೆಯಿಂದ ಅಧಿಕೃತವಾಗಿ ಮಾತುಕತೆಗೆ ಆಹ್ವಾನ ಬಂದಿಲ್ಲ. ಬಂದರೆ ಯೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

-ಅರುಣ್ ಕುಮಾರ್ ಪುತ್ತಿಲ

ಮುಖಂಡ ಕಾರಣರಾದ ಅರುಣ್ ಪುತ್ತಿಲ, ಚುನಾವಣೆ ಬಳಿಕವೂ ತನ್ನ ಮುಂದುವರಿಸಿರುವುದು ಹೈಕಮಾಂಡ್ ಮತ್ತು ಸಂಘದ ಚಿಂತೆಗೆ ಕಾರಣವಾಗಿದೆ. ದ.ಕ.ದಲ್ಲಿ ನಿಧಾನವಾಗಿ ಬಿಜೆಪಿ-ಹಿಂದುತ್ವ ಕಾರ್ಯಕರ್ತರ ಮಧ್ಯೆ ಹೆಚ್ಚುತ್ತಿರುವ ಶೀತಲ ಸಮರದ ಎವರ, ಮಾಹಿತಿ ಯತ್ನಾಳ್ ಬಂದು ಹೋದ ಬಳಿಕ ಹೈಕಮಾಂಡ್‌ಗೆ ಸಿಕ್ಕಿದೆ. ಇದು ಮುಂದುವರಿದರೆ ಲೋಕಸಭೆ ಚುನಾವಣೆ ಮೇಲೆ ಮಾರಕ ಪರಿಣಾಮ ಬೀರುವ ಸಂಭಾವ್ಯದ ಬಗ್ಗೆ ನಾಯಕತ್ವ ತಲೆಕೆಡಿಸಿಕೊಂಡಿದೆ. ಜಿಪಂ, ತಾಪಂ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಏನು ಮಾಡೋದು? ಎಂಬ ಚಿಂತೆಯೂ ಕಾಡಿದೆ. ಹೀಗಾಗಿ ಶೀಘ್ರವೇ ಪುತ್ತಿಲ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಹೈಕಮಾಂಡ್‌ಗೆ ಎದುರಾಗಿದೆ.

ಹಲವು ವಿದ್ಯಮಾನಗಳು: 2024ರ ಲೋಕ ಸಭೆ ಚುನಾವಣೆಯಲ್ಲಿ ದ.ಕ. ಕ್ಷೇತ್ರದ ಬಿಜೆಪಿ ಟಿಕೆಟನ್ನು ಪುತ್ತಿಲರಿಗೆ ನೀಡಬೇಕೆಂದು ಹಿಂದೂ ಕಾರ್ಯಕರ್ತರಿಂದ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ, ಮೂವರು ಹಿಂದುತ್ವ ಚಳವಳಿಕಾರರು ಬಿಜೆಪಿ ಶಾಸಕ ರೊಬ್ಬರ ವಿರುದ್ಧ ನೀಡಿದ ಬಹಿರಂಗ ಹೇಳಿಕೆ ಗಳು, ಇದಕ್ಕೆ ಕಾರಣವಾದ ಅಂಶಗಳು ಸಂಘ ಬೈಠಕ್‌ ನಲ್ಲಿ ಚರ್ಚೆಗೊಳಗಾಗಿದೆ. ಇದೇ ವೇಳೆ, ಸಂಘದ ಸೈದ್ಧಾಂತಿಕ ರಾಜಧಾನಿ ಪುತ್ತೂರಿನಲ್ಲಿ ಹಿಂದುತ್ವದ ಹೆಸರಿನಲ್ಲೇ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷದ ಸೋಲಿಗೆ ಅರುಣ್‌ ಪುತ್ತಿಲ ಅವರು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಂಧಾನಕ್ಕೆ ಅರುಣ್ ಪುತ್ತಿಲ ಈಗ ಒಬ್ಬರೇ ನಿರ್ಧಾರ ಕೈಗೊಳ್ಳುವ ಬದಲು ‘ಪುತ್ತಿಲ ಪರಿವಾರ’ ಜತೆ ಚರ್ಚಿಸಿ ಮುಂದುವರಿಯಲು ನಿರ್ಧರಿಸಿದ್ದಾರೆ. ಸ್ಥಾನ ನೀಡಿ ಪುತ್ತಿಲರನ್ನು ಮುಖ್ಯವಾಹಿನಿಗೆ ಪಕ್ಷದ ಜಿಲ್ಲಾ ಘಟಕದಲ್ಲಿ ತರುವ ಪ್ರಸ್ತಾಪವಿದೆ. ಇದನ್ನು ಪುತ್ತಿಲರಿಗೆ ಮನವರಿಕೆ ಮಾಡಲು ಜಿಲ್ಲೆಯ ಕೆಲ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈಗಲೇ ಹುದ್ದೆ ಸ್ವೀಕರಿಸಿದರೆ ಪಕ್ಷದ ಅಣತಿಯಂತೆ ನಡೆಯಬೇಕಾಗುತ್ತದೆ. ಪುತ್ತಿಲರನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುವವರಿಗೆ ಇದು ಸುಲಭ ಅಸ್ತವಾಗಲಿದೆ. ಹೀಗಾಗಿ ಲೋಕಸಭೆ ಚುನಾವಣೆವರೆಗೆ ಸ್ವತಂತ್ರವಾಗಿಯೇ ಇದ್ದು ಪುತ್ತಿಲ ಪರಿವಾರ ಅಭಿಯಾನ ಮುಂದುವರಿಸಿ ಹಿಂದೂ ಕಾರ್ಯಕರ್ತರ ಪಡೆ ಕಟ್ಟುವುದೇ ಉತ್ತಮ ಎಂಬ ಅಭಿಪ್ರಾಯ ಅವರ ಕೆಲವು ಆಪ್ತರಲ್ಲಿದೆ. ರಾಷ್ಟ್ರಮಟ್ಟದಲ್ಲಿ ಸಂಪರ್ಕ ಹೊಂದಿರುವ ಹಿರಿಯ ಮುಖಂಡರು ಪುತ್ತಿಲ ಪರಿವಾರವನ್ನು ಸಂಪರ್ಕಿಸಿದ್ದರೂ ಸಂಧಾನ ಸೂತ್ರ ಅಂತಿಮಗೊಂಡಿಲ್ಲ. ಈ ನಡುವೆ, ಅರುಣ್ ಪುತ್ತಿಲ ರಾಜ್ಯದ ಪ್ರಮುಖ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಇದರ ಹಿಂದೆ ಪುತ್ತಿಲ ಪರಿವಾರದ ಸ್ಪಷ್ಟ ಕಾರ್ಯತಂತ್ರ ಇದೆ ಎನ್ನಲಾಗುತ್ತಿದೆ.

By admin

Leave a Reply

Your email address will not be published. Required fields are marked *

error: Content is protected !!