ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಡಿಸಿಎಂ ಎನ್ನುವುದು ಸಾಂವಿಧಾನಿಕ ಹುದ್ದೆಯಲ್ಲ!

ಉಪ ಮುಖ್ಯಮಂತ್ರಿ ಸ್ಥಾನ ತಾಂತ್ರಿಕವಾಗಿ ಸಾಂವಿಧಾನಿಕ ಹುದ್ದೆಯಲ್ಲ. ಇದು ಯಾವುದೇ ನಿರ್ದಿಷ್ಟ ಅಧಿಕಾರವನ್ನೂ ಹೊಂದಿಲ್ಲ. ಉಪಮುಖ್ಯಮಂತ್ರಿ ಸಾಮಾನ್ಯವಾಗಿ ಗೃಹಮಂತ್ರಿ ಅಥವಾ ಹಣಕಾಸು ಸಚಿವರಂತಹ ಪ್ರಮುಖ ಕ್ಯಾಬಿನೆಟ್ ಪೋರ್ಟ್ ಪೋಲಿಯೋವನ್ನು ಹೊಂದಿರುತ್ತಾರೆ. ಉಪಮುಖ್ಯಮಂತ್ರಿ ಸ್ಥಾನವನ್ನು ಸಮ್ಮಿಶ್ರ ಸರ್ಕಾರದೊಳಗೆ ರಾಜಕೀಯ ಸ್ಥಿರತೆ ಮತ್ತು ಬಲವನ್ನು ತರಲು ಸೃಷ್ಟಿಸಲಾಗುತ್ತದೆ.

ಸಚಿವರಿಗಿಂತ ಹೆಚ್ಚಿನ ಅಧಿಕಾರವಿಲ್ಲ!

ವಾಸ್ತವವಾಗಿ, ಉಪಮುಖ್ಯಮಂತ್ರಿ ಹುದ್ದೆಗೆ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವರಿಗಿಂತ ಹೆಚ್ಚಿನ ಮಹತ್ವವಿಲ್ಲ. ಉಪ ಮುಖ್ಯಮಂತ್ರಿಗೆ ಮತ್ತೊಂದು ಪ್ರಮುಖ ಇಲಾಖೆ ಜವಾಬ್ದಾರಿಯೂ ಇರುತ್ತದೆ. ಅದರ ಹೊರತಾಗಿ ಡಿಸಿಎಂ ಅಂತ ಬೇರೆ ಹೆಚ್ಚಿನ ಅಧಿಕಾರ ಇರುವುದಿಲ್ಲ.

ಅಧಿಕಾರಿಗಳ ವರ್ಗಾವಣೆಯಲ್ಲಿ ಇವರ ಪಾತ್ರವಿಲ್ಲ

ರಾಜ್ಯದಲ್ಲಿ 1ನೇ ವರ್ಗದ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ನ ಏಕೈಕ ಅಧಿಕಾರ ಮುಖ್ಯಮಂತ್ರಿಗಳ ಬಳಿ ಇರುತ್ತದೆ. ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಅವರ ಮಾತೇ ಇಲ್ಲ. ಸರ್ಕಾರದ ಇತರ ಕ್ಯಾಬಿನೆಟ್ ದರ್ಜೆಯ ಸಚಿವರು ಅನುಭವಿಸುವ ವೇತನ ಮತ್ತು ಸವಲತ್ತುಗಳನ್ನು ಉಪಮುಖ್ಯಮಂತ್ರಿ ಪಡೆಯುತ್ತಾರೆ. ಆದಾಗ್ಯೂ, ಅವರು ತೆರಿಗೆ-ಮುಕ್ತ ಪಾವತಿ ಮತ್ತು ಪ್ರಯೋಜನಗಳನ್ನು ಪಡೆಯಬಹುದು.

ಸಿಎಂ ಕಡತವನ್ನು ಇವರು ನೋಡುವಂತಿಲ್ಲ!

ಆಡಳಿತದ ವಿಷಯಗಳಲ್ಲಿ, ಮುಖ್ಯಮಂತ್ರಿಗಳಿಗೆ ಮೀಸಲಿಟ್ಟ ಕಡತಗಳನ್ನು ನೋಡಲು ಉಪಮುಖ್ಯಮಂತ್ರಿಗಳಿಗೆ ಯಾವುದೇ ಅಧಿಕಾರವಿಲ್ಲ. ವಾಸ್ತವವಾಗಿ, ಉಪಮುಖ್ಯಮಂತ್ರಿ ಅವರು ತನಗೆ ಹಂಚಿಕೆಯಾದ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಫೈಲ್‌ಗಳನ್ನು ಕ್ಲಿಯರೆನ್ಸ್‌ಗಾಗಿ ಮುಖ್ಯಮಂತ್ರಿಗೆ ರವಾನಿಸಬೇಕಾಗುತ್ತದೆ.

ಇತರೇ ಇಲಾಖೆಗಳಿಗೆ ನಿರ್ದೇಶನ ನೀಡುವಂತಿಲ್ಲ!

ಉಪಮುಖ್ಯಮಂತ್ರಿ ಸ್ವತಃ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲು ಅಥವಾ ಮುಖ್ಯಮಂತ್ರಿಗಳು ತನಗೆ ನಿಗದಿಪಡಿಸಿದ ಇತರ ಇಲಾಖೆಗಳಿಗೆ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ. ಉಪಮುಖ್ಯಮಂತ್ರಿ, ಇತರ ಯಾವುದೇ ಸಚಿವರಂತೆ, ತಮ್ಮ ಇಲಾಖೆಗಳಿಗೆ ಮೀಸಲಿಟ್ಟ ಬಜೆಟ್‌ಗಿಂತ ಹೆಚ್ಚಿನ ವೆಚ್ಚಕ್ಕಾಗಿ ಮುಖ್ಯಮಂತ್ರಿಯಿಂದ ಕ್ಲಿಯರೆನ್ಸ್ ಪಡೆಯಬೇಕಾಗಿದೆ.

By admin

Leave a Reply

Your email address will not be published. Required fields are marked *

error: Content is protected !!