ಮಂಗಳೂರು : ಅವಿಭಜಿತ ದ.ಕ ಜಿಲ್ಲೆಯ 13 ಕ್ಷೇತ್ರಗಳಲ್ಲಿ  ಬಿಜೆಪಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದರೆ, ಕಾಂಗ್ರೆಸ್ ೨ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ಮಂಗಳೂರು ಅಂದರೆ ಉಳ್ಳಾಲ ಕಾಂಗ್ರೆಸ್ ನ ಭದ್ರಕೋಟೆ ಅ ಭದ್ರಕೋಟೆಗೆ ಯು.,ಟಿ ಖಾದರ್ ಕಿಂಗ್, ೨೦೧೮ ರಲ್ಲಿಯೂ ಅವಿಭಜಿತ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಮಾರ್ಯಾದಿ ಉಳಿಸಿದ ಕ್ಷೇತ್ರ ಅದು ಉಳ್ಳಾಲ ವಿಧಾನಸಭಾ ಕ್ಷೇತ್ರ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತವಾಗಿದೆ. ಮಂಗಳೂರು ವಿಧಾನಸಭಾ ಕ್ಶೇತ್ರದ ಯು.ಟಿ ಖಾದರ್ ಗೆ ಸಚಿವ ಸ್ಥಾನ ಸಿಗುವುದು ಕೂಡ ಪಕ್ಕಾ ಆಗಿದೆ. 

ಹೌದು ಎಲ್ಲಾ ಆಯಾಮದಲ್ಲೂ ಯು.ಟಿ ಖಾದರ್ ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ೪ನೇ ಬಾರಿಗೆ ಶಾಸಕರಾಗಿರುವ ಯು.ಟಿ ಖಾದರ್ ರಾಜ್ಯದಲ್ಲಿ ಪ್ರಭಾವಿ ನಾಯಕನೂ ಹೌದು.. ಜತೆಗೆ ಮುಸ್ಲಿಂ ಲೆಕ್ಕಚಾರದಲ್ಲಿ ನೀಡುವುದಿದ್ದರೂ ಸಚಿವ ಸ್ಥಾನ ಗ್ಯಾರಂಟಿ, ಇನ್ನೂ ಕರಾವಳಿ ಪ್ರಾದಾನ್ಯತೆ ನೀಡುವುದಿದ್ದರೂ ಖಾದರ್ ಅಗ್ರಸ್ಥಾನದಲ್ಲಿ ಕಾಣುತ್ತಾರೆ. ಈ ಹಿಂದೆ ವಿರೋಧ ಪಕ್ಷದ ಉಪನಾಯಕನಾಗಿದ್ದ ಯು.ಟಿ ಖಾದರ್ ಕಾಂಗ್ರೆಸ್ ಸರಕಾರ ವಿದ್ದಾಗ ಪ್ರಭಾವಿ ಸಚಿವ ಸ್ಥಾನಗಳನ್ನು ಕೂಡ ನಿಭಯಿಸಿ ಯಶಸ್ವಿಯಾಗಿದ್ದರು.

ಯು.ಟಿ ಖಾದರ್ ಗೆ ಹೋಮ್ ಮಿನಿಸ್ಟರ್ ಪಕ್ಕಾ

ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಇನ್ನೂ ಯು.ಟಿ ಖಾದರ್ ಅವರು ಹಿರಿತನ, ಅನುಭವ ಹಾಗೂ ಮುಸ್ಲಿಂ ಪ್ರಾದಾನ್ಯತೆ ಈ ಎಲ್ಲಾ ವಿಚಾರವನ್ನು ನೋಡಿ ಖಾದರ್ ಅವರಿಗೆ ಪ್ರಭಾವಿ ಸಚಿವ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ. ಯು.ಟಿ ಖಾದರ್ ಅವರಿಗೆ ಗೃಹ ಇಲಾಖೆ ನೀಡುವ ಸಾಢ್ಯತೆಗಳು ಹೆಚ್ಚಿದೆ ಎನ್ನಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!