ಬಂಟ್ವಾಳ: ಹಿಂದೂ ಸಾಮ್ರಾಟ್ ಯು.ಪಿ. ಮುಖ್ಯಮಂತ್ರಿ ಚುನಾವಣಾ ಸ್ಟಾರ್ ಪ್ರಚಾರಕಲ್ಲಿ ಓರ್ವರಾದ ಯೋಗಿ ಆದಿತ್ಯನಾಥ್ ಅವರು ಇಂದು ಬಂಟ್ವಾಳದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರವಾಗಿ ಮತಯಾಚನೆ ನಡೆಸಲಿದ್ದಾರೆ‌.
ಸಂಜೆ 5 ಗಂಟೆಯಿಂದ 6 ಗಂಟೆ ವರೆಗೆ ಸುಮಾರು 1 ಗಂಟೆಗಳ ಕಾಲ ರೋಡ್ ಶೋ ನಲ್ಲಿ ಭಾಗವಹಿಸಿ ಮಂಗಳೂರು ಮೂಲಕ ವಾಪಾಸು ಹೋಗಲಿದ್ದಾರೆ.
ಬೆಳಿಗ್ಗೆ ಶಿವಮೊಗ್ಗ ಹೆಲಿಕ್ಯಾಪ್ಟರ್ ನ ಮೂಲಕ ಬರುವ ಯೋಗಿ ಅವರು ಶಿವಮೊಗ್ಗದಿಂದ ಕೊಪ್ಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಅಬಳಿಕ ಕೊಪ್ಪದಿಂದ ನೇರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬರಲಿದ್ದಾರೆ.ಅಲ್ಲಿ ರೋಡ್ ಶೋ ಮೂಲಕ ಪ್ರಚಾರದಲ್ಲಿ ಭಾಗವಹಿಸಿದ ಬಳಿಕ ಅಲ್ಲಿಂದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ರೋ ಶೋ ನಲ್ಲಿ ಭಾಗವಹಿಸಲಿದ್ದಾರೆ.
ಅಲ್ಲಿಂದ ಹೊನ್ನಾವರಕ್ಕೆ ತೆರಳಿ ಹೊನ್ನಾವರದಲ್ಲಿ ಕಾರ್ಯಕ್ರಮ ಮುಗಿಸಿ 4.40 ರ ಸಮಯದಲ್ಲಿ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಖಾಸಗಿ ಗ್ರೌಂಡ್ ನಲ್ಲಿ ಹೆಲಿಪ್ಯಾಡ್ ಲ್ಯಾಂಡ್ ಅಗಲಿದೆ.
ಅಬಳಿಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾದ ರೋಡ್ ಶೋ ಪ್ರಚಾರದಲ್ಲಿ ಭಾಗವಹಿಸಲಿರುವರು.
ಕೈಕಂಬ ಪೊಳಲಿ ದ್ವಾರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಕಾರ್ಯಕರ್ತರ ಜೊತೆಗೆ ರೋಡ್ ಶೋ ನಲ್ಲಿ ಯೋಗಿ ಆದಿತ್ಯನಾಥ್ ಅವರು ಬಾಗವಹಿಸಲಿದ್ದಾರೆ.
ಬಿಗಿ ಬಂದೋಬಸ್ತ್
‌ಯು.ಪಿ.ಸಿ.ಎಮ್ ಯೋಗಿ ಆದಿತ್ಯನಾಥ್ ಬಂಟ್ವಾಳದ ರೋಡ್ ಶೋ‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.
ಭದ್ರತಾ ದೃಷ್ಟಿಯಿಂದ ಮಿಲಿಟರಿ ಪಡೆ ಸಹಿತ ವಿವಿಧ ಪೋಲೀಸ್ ತುಕಡಿಗಳು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.
ಡಿ.ಐ.ಜಿ.ಎಸ್.ಪಿ.ಸಹಿತ ಉನ್ನತ ಮಟ್ಟದ ಅ಼ಧಿಕಾರಿಗಳು ಬಿಸಿರೋಡಿನ ಯೋಗಿ ಲ್ಯಾಂಡ್ ಅಗುವ ಜಾಗವನ್ನು ಪರಿಶೀಲನೆ ನಡೆಸಿದ್ದಾರೆ‌.
ಸಾವಿರಕ್ಕೂ ಅಧಿಕ ಪೋಲೀಸರನ್ನು ನಿಯೋಜನೆ ಮಾಡಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ 30 ಕ್ಕೂ ಅಧಿಕ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದು, ಈ ಸಂದರ್ಭ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಯೋಗಿ ಆದಿತ್ಯನಾಥ್ ಅವರು ಆಗಮಿಸುವ ಹೆಲಿಪ್ಯಾಡ್ ಸ್ಥಳ ಬದಲಾವಣೆಯಾಗಿದ್ದು, ಅವರು ಬಂಟ್ವಾಳ ತಾಲೂಕು ಶಾಂತ ಜಿ ಮೇಲಾಂಟ ಇವರ ಬಸ್ತಿಪಡು ಮೈದಾನದಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿಯಲಿರುವುದರಿಂದ ಮತ್ತು ಕಾರ್ಯಕ್ರಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳನ್ನು ಬಂಟ್ವಾಳ ತುಂಬೆ ಜಂಕ್ಷನ್ (ಮೂಡಬಿದ್ರೆ ಕ್ರಾಸ್) ನಿಂದ ಸ್ವರ್ನಾಡು-ಮೂಲರಪಟ್ನ -ಸೂರಲ್ಪಾಡಿ-ಗುರುಪುರ ಕೈಕಂಬ ಮೂಲಕ ಮಂಗಳೂರು ಕಡೆಗೆ ತೆರಳುವುದು.
ಮಂಗಳೂರುನಿಂದ ಬೆಂಗಳೂರು ಕಡೆಗೆ ತೆರಳುವ ವಾಹನಗಳನ್ನು ಪಂಪ್‌ ವೆಲ್ ನಿಂದ ತೊಕ್ಕಟ್ಟು-ಮುಡಿಸು-ಮೆಲ್ಕಾರ್- ಮಾರ್ಗದ ಮೂಲಕ ಬೆಂಗಳೂರು ಕಡೆಗೆ ಸಂಚರಿಸುವುದು
ಮಂಗಳೂರುನಿಂದ ಬೆಳ್ತಂಗಡಿಗೆ ತೆರಳುವ ವಾಹನಗಳನ್ನು ಗುರುಪುರ ಕೈಕಂಬ-ಸೂರಲ್ಪಾಡಿ- ಮೂಲರಪಟ್ನ-ಸ್ವರ್ನಾಡು ಮೂಲಕ ಬೆಳ್ತಂಗಡಿಗೆ ತೆರಳುವುದು.
ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮೆಲ್ಕಾರ್, ಮುಡಿಪು ತೊಕ್ಕೊಟ್ಟು ಮೂಲಕ ಮಂಗಳೂರಿಗೆ ತೆರಳುವುದು.
ಮೇಲ್ಕಂಡ ಮಾರ್ಗಗಳಲ್ಲಿ ದಿನಾಂಕ: 06.05.2023 ರಂದು ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 8:00 ಗಂಟೆ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ಯಾಯ ಮಾರ್ಗ ಬದಲಾವಣೆ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಆಗದಂತೆ ಪೊಲೀಸ್ ಅದೀಕ್ಪಕರು ಆದೇಶ ಹೊರಡಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!