ಕಾಸರಗೋಡು : ಸೈಬರ್ ದಾಳಿಗೆ ಮನನೊಂದು ಯುವತಿಯೊಬ್ಬಳು    ಆತ್ಮಹತ್ಯೆ   ಮಾಡಿಕೊಂಡ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಕಾಸರಗೋಡಿನ ವಸತಿ ಗ್ರಹ ವೊಂದರಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ .

ಕೊಟ್ಟಾಯಂ  ಕೋದನಲ್ಲೂರಿನ  ಅರುಣ್ ವಿದ್ಯಾಧರನ್ (೩೨) ಮೃತಪಟ್ಟವರು .
ಕಾಞ೦ಗಾಡ್ ನ   ವಸತಿ ಗ್ರಹವೊಂದರಲ್ಲಿ ಗುರುವಾರ ಮಧ್ಯಾಹ್ನ  ಮೃತಪಟ್ಟ   ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೋದನಲ್ಲೂರಿನ    ಆದಿರಾ   ಮುರಳೀಧರನ್ (೨೬)
  ಎಂಬಾಕೆಯ ಆತ್ಮಹತ್ಯೆ   ಬಳಿಕ
ಈತ ತಲೆಮರೆಸಿಕೊಂಡಿದ್ದು ,
ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು.

ಆರೋಪಿ    ಕೇರಳ ಬಿಟ್ಟು ಪರಾರಿಯಾಗಿದ್ದಾಗಿ     ಮೊಬೈಲ್ ಟವರ್ ಲೊಕೇಶನ್ ನಿಂದ ಪತ್ತೆಯಾದ  ಹಿನ್ನಲೆಯಲ್ಲಿ  ಕೊಯಂಬತ್ತೂರಿಗೂ ತೆರಳಿ ಪೊಲೀಸರು  ಶೋಧ ನಡೆಸಿದ್ದರು . ಆರೋಪಿ ಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆ ಗೊಳಿಸಿದ್ದರು.
ಈ ನಡುವೆ ಗುರುವಾರ ಕಾಞ೦ಗಾಡ್ ನ ವಸತಿ ಗ್ರಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ  
ಈತ ಫೈನಾಪಲ್  ವ್ಯಾಪಾರೀ ಎಂದು ಮಲಪ್ಪುರಂ ಪೆರಿಂದಲ ಮಣ್ಣ ದ  ರಾಜೇಶ್ ಕುಮಾರ್ ಎಂಬ ನಕಲಿ ವಿಳಾಸ ನೀಡಿ ಮೇ   ಎರಡರಂದು  ವಸತಿ ಗ್ರಹದಲ್ಲಿ  ಕೊಠಡಿ ಪಡೆದಿದ್ದರು .    ಕೊಠಡಿಯಿಂದ ಮತದಾರ ಚೀಟಿ , ಡ್ರೈವಿಂಗ್ ಲೈಸನ್ಸ್  ಪತ್ತೆಯಾಗಿದ್ದು , ಇದರಿಂದ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು
ಏಪ್ರಿಲ್ ೩೦ ರಂದು  ಕೊಟ್ಟಾಯಂ ಕಡತುರುತ್ತಿ  ಕೋದನಲ್ಲೂರಿನ  ಆದಿರಾ ಮನೆಯ ಕೋಣೆಯಲ್ಲಿ  ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು

ಅದಿರಾ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದ ನು . ಹೀಗಾಗಿ ಆದಿ ರಾ ಅವರು ಅರುಣ್ ಜೊತೆಗಿನ ಸ್ನೇಹವನ್ನು ತ್ಯಜಿಸಿದ್ದರು. ಅದಿ ರಾಗೆ ಮದುವೆ ಪ್ರಸ್ತಾಪ ಬರುತ್ತಿವೆ ಎಂಬುದನ್ನು ತಿಳಿದುಕೊಂಡಿದ್ದ ಅರುಣ್, ಸೋಷಿಯಲ್ ಮೀಡಿಯಾ ಮೂಲಕ ಅದಿ ರಾಳನ್ನು ನಿಂದಿಸಿದ್ದನಂತೆ. ಫೇಸ್ಬುಕ್ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್ ಮಾಡಿ ಮಾನಹಾನಿಕರವಾಗಿ ಬರಹಗಳನ್ನು ಹಾಕಿದ್ದು ಇದರ ಬಗ್ಗೆ ಅದಿರಾ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತುಂಬಾ ಬೇಸರಗೊಂಡಿದ್ದ ಆಕೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು

By admin

Leave a Reply

Your email address will not be published. Required fields are marked *

error: Content is protected !!