ಸುಳ್ಯ, ಜಗತ್ತು ಭಾರತೀಯ ಜನತಾ ಪಾರ್ಟಿಯನ್ನು ಹಿಂದುತ್ವದ ಪಾರ್ಟಿ ಎಂದು ಹೇಳುತ್ತಿದೆ. ಆವಾಗ ಯಾರೋ ಒಬ್ಬ ಎದ್ದು ನಿಂತು ನಾನು ಹಿಂದುತ್ವ ಅಂತ ಹೇಳುವುದು ಯಾವ ನ್ಯಾಯ ಎಂದು ಆರ್.ಎಸ್.ಎಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಅರುಣ್ ಕುಮಾರ್ ಪುತ್ತಿಲರವರು ಪಕ್ಷೇತರ ಅಭ್ಯರ್ಥಿಯಾಗಿ ಹಿಂದುತ್ವದಡಿಯಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಬೆಳ್ಳಾರೆಯ ನೆಟ್ಟಾರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಅರುಣ್ ಪುತ್ತಿಲ ಹಿಂದೆನು ಹಿಂದುತ್ವಕ್ಕಾಗಿ ಕೆಲಸ ಮಾಡ್ಲಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಗೋ ಸಾಗಾಟದ ಹೋರಾಟದಲ್ಲಿ ಭಾಗವಹಿಸಿರಬಹುದು. ಆ ವ್ಯಕ್ತಿ ಹಿಂದೂಗಳ ವಿರುದ್ಧವೇ ಹೋರಾಟ ಮಾಡಿರುವಂತದ್ದು, ಆಫಿದಾವಿತ್ ನಲ್ಲಿ ಬರೆದುಕೊಂಡಿದ್ದಾರೆ. ಏನೆಲ್ಲಾ ಪ್ರಕರಣಗಳಿವೆ ಅಂತ ಅದನ್ನು ಸ್ವಲ್ಪ ನೋಡಿ, ಅಂಥವರು ಹಿಂದುತ್ವನಾ..!?? ಹಿಂದೂಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು, ಒಂದು ಹೆಣ್ಣು ಮಗಳು ಸತ್ತಾಗ ಅದನ್ನು ನೋಡದ ಮಾನವೀಯತೆ ಇಲ್ಲದವರು. ಯಾರದ್ದೋ ಜಾಗದಲ್ಲಿ ದಾರಿ ಬೇಕು ಎಂದು ಜಗಳ ಮಾಡಿ 307 ಹಾಕಿಸಿಕೊಂಡವರು, ಅವರದ್ದು ಎಂಥಾ ಹಿಂದುತ್ವ? ಎಂದರು.

ಅನೇಕ ಕಾರ್ಯಕರ್ತರಿಗೆ ಈ ಬಗ್ಗೆ ಗೊತ್ತಿಲ್ಲ. ಭಾರತೀಯ ಜನತಾ ಪಾರ್ಟಿ ಗಿಂತ ಮೇಲಿನ ಹಿಂದುತ್ವವಿಲ್ಲ, ಇದೊಂದು ಅಖಿಲ ಭಾರತ ಸಂಘಟನೆ ಪುತ್ತೂರಿಗೆ ಮಾತ್ರ ಸಂಬಂಧಪಟ್ಟಂತಹದ್ದು ಮಾತ್ರ ಅಲ್ಲ. ದೇಶದಾದ್ಯಂತ ಇರುವ ಸಂಘಟನೆ. ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರು, ಕೇಂದ್ರದ ಗೃಹಸಚಿವ ಅಮಿತ್ ಶಾ ಅವರು ನಾನು ಅವರತ್ರ ಮಾತಾಡುತ್ತೇನೆ ಎಂದು ಹೇಳಿದಾಗಲೂ ಧಿಕ್ಕರಿಸಿದಂತಹ ವ್ಯಕ್ತಿ. ಅವರೇನು ಹಿಂದುತ್ವಕ್ಕೋಸ್ಕರ ಕೆಲಸ ಮಾಡಿಯಾರು. ಪಕ್ಷೇತರವಾಗಿ ನಿಂತು ಅವರೇನು ಕೆಲಸ ಮಾಡಬಹುದು. ಏನಾದ್ರೂ ಅಭಿವೃದ್ಧಿ ಮಾಡ್ಲಿಕೆ ಸಾಧ್ಯನಾ. ಅವರು ಗೆಲ್ಲುವುದಿಲ್ಲ. ಆದ್ರೇ ಬೇರೆ ಪಕ್ಷದವರು ಗೆಲ್ಲದಿದ್ದರೂ ಅಭಿವೃದ್ಧಿಯನ್ನು ಮಾಡುತ್ತಾರೆ. ಆದ್ರೆ ಪಕ್ಷೇತರವಾಗಿ ನಿಂತವರಿಗೆ ಏನು ಮಾಡಲು ಸಾಧ್ಯವಿಲ್ಲ. ಅವರಿಗೆ ಹೇಳುವವರಿಲ್ಲ, ಕೇಳುವವರು ಇಲ್ಲ. ಹಾಗಾಗಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲವನ್ನು ನೀಡಬೇಕು. ಭಾರತೀಯ ಜನತಾ ಪಾರ್ಟಿಯನ್ನು ಉಳಿಸಬೇಕು. ಬೆಳೆಸಬೇಕು ಹಾಗೆ ಹಿಂದುತ್ವವನ್ನು ಉಳಿಸಬೇಕು, ದೇಶವನ್ನು ಬೆಳೆಸಬೇಕು’ ಎಂದರು.

By admin

Leave a Reply

Your email address will not be published. Required fields are marked *

error: Content is protected !!