ಮಕ್ಕಾ: ಪವಿತ್ರ ಉಮ್ರಾ ನಿರ್ವಹಿಸಲು ಮಕ್ಕಾ ತಲುಪಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಆಸ್ಪತ್ರೆ ಸೇರಿ ಕೊನೆಯುಸಿರೆಳೆದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಉಸ್ಮಾನ್ ಎಂಬವರು ಉಮ್ರಾ ನಿರ್ವಹಿಸುತ್ತಿರುವ ವೇಳೆ ಹೃದಯಘಾತಗೊಂಡು ಮಕ್ಕಾದ ಕಿಂಗ್ ಫೈಸಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮಾರ್ಚ್ 31 ರಂದು ಕೊನೆಯುಸಿರೆಳೆದಿದ್ದಾರೆ.
ಈ ವೇಳೆ ಮೃತರ ಅಂತ್ಯಕ್ರಿಯೆಗೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಚೇರಿಗೆ ಕಡತಗಳು ಹಾಗೂ ಇನ್ನಿತರ ವ್ಯವಸ್ಥೆಯನ್ನು ತ್ವರಿತಗತಿಯಲ್ಲಿ ಸಿದ್ಧಪಡಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಮಕ್ಕಾ ಸೆಕ್ಟರ್ ಸಾಂತ್ವನ ಇಲಾಖೆ ಹಾಗೂ ಜಿದ್ದಾ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷ ಮೂಸಾ ಹಾಜಿ ಕಿನ್ಯ ಮತ್ತು ಕೆಸಿಎಫ್ ಮದೀನತುಲ್ ಮುನವ್ವರ ಝೋನ್ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಝ್ಝಾಖ್ ಉಳ್ಳಾಲ ಸಹಕರಿಸಿದರು.
ಮಯ್ಯಿತ್ ದಫನ ಕಾರ್ಯದಲ್ಲಿ ಮೃತರ ಮಗ ಶಮೀಉಲ್ಲಾ, ಸಹೋದರ ಶರೀಫ್, ಬಾವ ಹಮೀದ್ ಮತ್ತು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝ್ಝಾಖ್ ರಂತಡ್ಕ, ಪ್ರಧಾನ ಕಾರ್ಯದರ್ಶಿ ಹನೀಫ್ ಕೋಳ್ಯೂರು, ಇಹ್ಸಾನ್ ಇಲಾಖೆ ಅಧ್ಯಕ್ಷರು ಅಬ್ದುಲ್ ಲತೀಫ್ ನೆಲ್ಯಾಡಿ, ಕೆಸಿಎಫ್ ಕುದೈ ಯೂನಿಟ್ ಅಧ್ಯಕ್ಷರು ರಫೀಕ್ ಬೆಳಂದೂರು, ಸದಸ್ಯರಾದ ಇಕ್ಬಾಲ್ ಗಬ್ಗಲ್, ಹಾಗೂ ಸಾಮಾಜಿಕ ಕಾರ್ಯಕರ್ತ ಶಾಕಿರ್ ಹಕ್ಕ್ ನೆಲ್ಯಾಡಿ ಮೊದಲಾದವರು ಭಾಗವಹಿಸಿದ್ದರು.

By admin

Leave a Reply

Your email address will not be published. Required fields are marked *

error: Content is protected !!