ಪೆರುವಾಯಿ, ಇಲ್ಲಿನ ಫಾತಿಮಾ ಮಾತೆಯ ದೇವಾಲಯದ ಐಸಿವೈಎಂ ಘಟಕದ ವತಿಯಿಂದ ಫಾತಿಮಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರಿಗೆ ತ್ರೋಬಾಲ್ ಆಯೋಜಿಸಲಾಗಿತ್ತು.

ಒಟ್ಟು ಆರು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅದೆಂಜಿಗುಳಿ ಡೊಮಿನೇಟರ್ ತಂಡ ಕ್ರಿಕೆಟ್ ನಲ್ಲಿ ಗೆದ್ದುಕೊಂಡರೆ, ಆಂಗ್ಲಕೋಡಿ ತಂಡ ರನ್ನರ್ ಪ್ರಶಸ್ತಿ ಗೆದ್ದುಕೊಂಡಿತು.

ಮತ್ತೊಂದೆದೆ ಮಹಿಳಾ ವಿಭಾಗದಲ್ಲಿ ಸಾಯ ವಾರಿಯರ್ ಪ್ರಥಮ ಬಹುಮಾನ ಗೆದ್ದರೆ, ಸ್ಟಾರ್ ಪ್ಲೇಯರ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.

ವಿಜೇತರಿಗೆ ದೇಲಂತಬೆಟ್ಟು ಚರ್ಚ್ ನ ಧರ್ಮಗುರು ಹಾಗೂ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಫಾ. ಸುನಿಲ್ ಪ್ರವೀಣ್ ಪಿಂಟೋ ಹಾಗೂ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಫಾ. ವಿಶಾಲ್ ಮೋನಿಸ್ ಅಭಿನಂಧಿಸಿ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು.

By admin

Leave a Reply

Your email address will not be published. Required fields are marked *

error: Content is protected !!