ಕಾಸರಗೋಡು, ನವಜಾತ ಶಿಶುವಿನ ಗಂಟಲಲ್ಲಿ ತಾಯಿಯ ಎದೆಹಾಲು ಸಿಲುಕಿ ಸಾವಿಗೀಡಾಗಿದ ಹೃದಯ ವಿದ್ರಾವಕ ಘಟನೆಯೊಂದು ಬದಿಯಡ್ಕದಲ್ಲಿ ವರದಿಯಾಗಿದೆ.

ಎದೆಹಾಲು ಗಂಟಲಲ್ಲಿ ಸಿಲುಕಿ ಉಕ್ಕಿನಡ್ಕ ನಿವಾಸಿಗಳಾದ ಅಬ್ದುಲ್‌ ರಹ್ಮಾನ್‌-ತಾಹಿರಾ ದಂಪತಿಯ 25 ದಿನದ ಹಸುಗೂಸು ಸಾವಿಗೀಡಾಗಿದೆ.

ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿತು. ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೂ ಆ ಬಳಿಕ ಕಾಸರಗೋಡು ಜನರಲ್‌ ಆಸ್ಪತ್ರೆಗೂ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!