ಮಂಗಳೂರು : ಶರಣ್‌ ಪಂಪ್‌ ವೆಲ್‌ ಅವರನ್ನು ಕೂಡಲೇ ಬಂಧಿಸಿ ಹೆಚ್ಚಿನ ತನಿಖೆಯನ್ನು ನಡೆಸ ಬೇಕೆಂದು ಒತ್ತಾಯಿಸಿ ಫಾಝಿಲ್ ಅವರ ತಂದೆ ಉಮರ್ ಫಾರೂಕ್‌  ಅವರು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

  ಸುರತ್ಕಲ್ ನಲ್ಲಿ ನಡೆದ ಮೊಹಮ್ಮದ್‌ ಫಾಝಿಲ್ ಕೊಲೆ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಸಮರ್ಥಿಸಿ ಹೇಳಿಕೆ ನೀಡಿರುವುದರಿಂದ ಶರಣ್‌ ಪಂಪ್‌ ವೆಲ್‌ ಅವರನ್ನು ಕೂಡಲೇ ಬಂಧಿಸಿ ಹೆಚ್ಚಿನ ತನಿಖೆಯನ್ನು ನಡೆಸ ಬೇಕೆಂದು ಒತ್ತಾಯಿಸಿ ಫಾಝಿಲ್ ಅವರ ತಂದೆ ಉಮರ್ ಫಾರೂಕ್‌  ಅವರು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಫಾಝಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ಕೊಲೆ ಪ್ರಕರಣದ ಸೂತ್ರಧಾರರ ಬಗ್ಗೆ ತನಿಖೆ ನಡೆಸುವಂತೆ ನಾನು ಕೇಳಿಕೊಂಡಿದ್ದು, ಇದುವರೆಗೆ ಯಾರನ್ನೂ ತನಿಖೆಗೆ ಒಳ ಪಡಿಸಿಲ್ಲ.

ಇದೀಗ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಫಾಝಿಲ್‌ ಕೊಲೆ ನಡೆಸಲಾಗಿದೆ ಎಂದು ಶರಣ್‌ ಪಂಪ್‌ ವೆಲ್‌ ಬಹಿರಂಗವಾಗಿ ಹೇಳಿಕೆ ನೀಡಿರುವುದರಿಂದ ನನ್ನ ಮಗ ಫಾಝಿಲ್‌ ಹತ್ಯೆಯ ಬಗ್ಗೆ ಶರಣ್‌ಗೆ ಸಂಪೂರ್ಣ ಮಾಹಿತಿ ಇದ್ದು, ಅವರ ಆಣತಿಯಂತೆ ಕೊಲೆ ನಡೆದಿರ ಬಹುದೆಂಬ ಅನುಮಾನವಿದೆ.

ಆದ್ದರಿಂದ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸ ಬೇಕು’ ಎಂದವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಉಮರ್‌ ಫಾರೂಕ್ , ‘ಈ ಪ್ರಕರಣದಲ್ಲಿ ನಾನು ಕಾನೂನು ಹೋರಾಟ ನಡೆಸುತ್ತೇನೆ. ಸುರತ್ಕಲ್‌ ಠಾಣೆಯಲ್ಲೂ ಕೇಸು ದಾಖಲಿಸುತ್ತೇನೆ’ ಎಂದರು.

‘ ಒಬ್ಬ ನಿರಪರಾಧಿಯನ್ನು 8 ಜನರು  ಅಟ್ಟಾಡಿಸಿ ಕೊಲ್ಲುವುದು ವೀರತನವಲ್ಲ; ಹೇಡಿತನ. ಹಿಂದುಗಳು ಇಂತಹ ಕೆಲಸ ಮಾಡಲಾರರು.  ಹಾಗಾಗಿ ಹಿಂದುಗಳು ಎಂದು ಹೇಳುವುದು ಬೇಡ.

ಹಿಂದುತ್ವವಾದಿಗಳ ಗುಂಪು ಎಂದು ಹೇಳಲಿ. ಅದು ಹಣ ಮಾಡುವ ಗುಂಪು. ಹಿಂದೂಗಳನ್ನು ಇದರಲ್ಲಿ ಎಳೆದು ತರ ಬೇಡಿ. ಹಿಂದು ಮುಸ್ಲಿಂ ಗಲಾಟೆ ಮಾಡಿಸುವುದು ಬೇಡ.

ತಾಕತ್ತಿದ್ದರೆ ಶರಣ್ ಪಂಪ್‌ವೆಲ್‌ ಒಬ್ಬ ನನ್ನನ್ನು ಕೊಲೆ ಮಾಡಲು ಬರಲಿ. ನಾನೂ ಒಬ್ಬನೇ ಹೋಗುತ್ತೇನೆ ಎಂದು ತಿಳಿಸಿದರು.

ತನ್ನ ಹುಡುಗರನ್ನು ಕಳಿಸಿ ಫಾಝಿಲ್‌ನನ್ನು ಅಟ್ಟಾಡಿಸಿ ಕೊಂದಿರುವುದು ಇವರ ಶೌರ್ಯ ಅಲ್ಲ, ಅದು ಅವರ ಹೇಡಿತನ. ಅವರಿಗೆ ಧೈರ್ಯ ಇದ್ದರೆ ನನ್ನನ್ನು ಬಂದು ಎದುರಿಸಲಿ ಎಂದು ಶರಣ್ ಪಂಪ್ ವೆಲ್ ಸವಾಲು ಹಾಕಿದರು.

By admin

Leave a Reply

Your email address will not be published. Required fields are marked *

error: Content is protected !!