ಶಾಲೆ ಮತ್ತು ಧಾರ್ಮಿಕ ಕೇಂದ್ರಗಳು ಪ್ರತಿ ಗ್ರಾಮದ ಪ್ರತಿಬಿಂಬ. ಇವುಗಳಲ್ಲಿ ಜನ ಸಹಭಾಗಿತ್ವವೇ ಗ್ರಾಮದ ಅಭಿವೃದ್ಧಿ – ಎಂದು ಮಾಣಿಲ ಶ್ರೀಧಾಮದ ಪರಮಪೂಜ್ಯ ಸ್ವಾಮೀಜಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಅವರು ಸರಕಾರಿ ಪ್ರೌಢ ಶಾಲೆ ಮಾಣಿಲದ ಶಾಲಾವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಸವಿನೆನಪಿಗಾಗಿ ಹಮ್ಮಿಕೊಳ್ಳಲಾದ ಅಭಿವೃದ್ಧಿ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವಚನ ಮಾಡಿ ಮಾತನಾಡಿದರು.
ಶ್ರೀ ಕಾಳಿಕಾ೦ಜನೇಯ ಕ್ಷೇತ್ರ ಕುಕ್ಕಾಜೆ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿಯವರು ಶುಭ ನುಡಿಗೈದರು. ಪೆರುವಾಯಿ ಫಾತಿಮಾ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ವಿಶಾಲ್ ಮೋನಿಸ್ ಶುಭ ನುಡಿಗೈದರು. ಶಾಸಕರಾದ ಸುಂಜೀವ ಮಠಂದೂರು ಅವರು ಆಗಮಿಸಿ ಶಾಲೆಗೆ 16.4 ಲಕ್ಷ ರೂ. ಅನುದಾನದಲ್ಲಿ ಮಂಜೂರಾದ ಎರಡು ತರಗತಿ ಕೊಠಡಿಗಳಿಗೆ ಶಿಲಾನ್ಯಾಸ ಮಾಡಿ ಮಾತಾಡಿದರು. 2 ಲಕ್ಷ ರೂ ಅನುದಾನದ ಇ – ಓದು (ಪ್ರೊಜೆಕ್ಟರ್) ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಸೂರಂಪಳ್ಳ ವಹಿಸಿ ಮಾತನಾಡಿದರು.
ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆ ಅಳಿಕೆಯ ಸಂಚಾಲಕರಾದ ಚಂದ್ರಶೇಖರ ಭಟ್ ಆಶಯ ಭಾಷಣ ಮಾಡಿ ವಿದ್ಯಾರ್ಥಿಗಳ ಸಾಧನೆ, ಶಾಲಾ ಅಭಿವೃದ್ಧಿಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಹಾಲಿಂಗನಾಯ್ಕ ಅಮೈ , ಶಾಲಾ ಸಂಸ್ಥಾಪಕರೂ ಸ್ಥಳದಾನಿಗಳೂ ಆಗಿರುವ ಮುರುವ ನಡುಮನೆ ಮಹಾಬಲ ಭಟ್, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಮುಣಿಯಾಣಿ ತಚ್ಚ ಮೆ, ಅಂತಾರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ವಿಜೇತ ದಯಾನಂದ ಕುಕ್ಕಾಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿಲ್ಫ್ರೆಡ್ ಡಿಸೋಜ, ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಂದರ ಭಟ್.ಎನ್ ಹಾಗೂ ಶಾಲಾ ದ್ವಿ.ದ ಸಹಾಯಕಿ ಗಿರಿಜ ಕೆ ಇವರನ್ನು ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಣಿಲ ಗ್ರಾ ಪಂ ಅಧ್ಯಕ್ಷೆ ವನಿತ, ಪೆರುವಾಯಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ವೈದ್ಯರಾಗಿರುವ ದುರ್ಗಾ ಪ್ರಸಾದ್ ಎ. ವಿ . ವಕೀಲರಾದ ಮೋಹನ್ ಮೈ ರ . ಹಿರಿಯ ಸಾಹಿತಿ ಅಬ್ದುಲ್ಲ ತೊಡಿಕಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಾಜೇಶ್ ಕುಮಾರ್ ಬಾಳೆಕಲ್ಲು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ವಿಷ್ಣು ಕನ್ನಡಗುಳಿ ಸ್ವಾತಂತ್ರ್ಯಅಮೃತ ಮಹೋತ್ಸವ ನಿಮಿತ್ತ ಶಾಲೆಯಲ್ಲಿ ಕೈಗೊಂಡ ಶೈಕ್ಷಣಿಕ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ ವರದಿ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಶಾಲಾ ಸ್ಮರಣ ಸಂಚಿಕೆ ‘ ಅಮೃತ ಸಿಂಚನ’ ದ ಮುಖಪುಟ ಅನಾವರಣ ಮಾಡಲಾಯಿತು.
ದೈ ಶಿ.ಶಿಕ್ಷಕ ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಭುವನೇಶ್ವರ್ ಸಿ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ಶಿಕ್ಷಕ ವರ್ಗ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ‘ಪೋಷಕರು, ಹಿರಿಯ ವಿದ್ಯಾರ್ಥಿಗಳು ಊರ ಪರವೂರ ವಿದ್ಯಾಭಿಮಾನಿಳು, ಹಿತೈಶಿಗಳು ಕಾರ್ಯಕ್ರಮದಲ್ಲಿ ಸಹಭಾಗಿಗಳಾದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಹಾಗೂ ಮಕ್ಕಳಿಂದ ‘ನರಕಾಸುರ ವಧೆ ” ಯಕ್ಷಗಾನ ಪ್ರದರ್ಶನ ನಡೆಯಿತು.

By admin

Leave a Reply

Your email address will not be published. Required fields are marked *

error: Content is protected !!