ಬಿಗ್ ಬಾಸ್ ಸೀಸನ್ 9ರ ವಿಜೇತರು ಯಾರು ಎನ್ನುವುದು ಇನ್ನು ಕೆಲವೇ ಗಂಟೆಗಳಲ್ಲಿ ಘೋಷಣೆ ಆಗಲಿದೆ. ಅದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ. ಗ್ರ್ಯಾಂಡ್ ಫಿನಾಲೆ ವೇದಿಕೆ ಹತ್ತಿದ್ದ ಐದು ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ ಮತ್ತು ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ. ಉಳಿದಿರುವುದು ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಮಾತ್ರ. ಇಬ್ಬರಲ್ಲಿ ಅದೃಷ್ಟ ಯಾರ ಪಾಲಾಗುತ್ತೋ ಕಾದು ನೋಡಬೇಕು.

ಮಧ್ಯಾಹ್ನದಿಂದ ಎರಡನೇ ದಿನದ ಕಾರ್ಯಕ್ರಮ ಶುರುವಾಗಿದ್ದು, ಆಗಲೇ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿಜೇತ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ರೂಪೇಶ್ ಗೆಳೆಯರು ಕೂಡ ಶುಭ ಹಾರೈಸುತ್ತಿದ್ದಾರೆ. ಈ ಕಡೆ ರಾಕೇಶ್ ಅಡಿಗ ಬೆಂಬಲಿಗರು ಕೂಡ ತಮ್ಮ ನೆಚ್ಚಿನ ನಟನೇ ಬಿಗ್ ಬಾಸ್ ಗೆದ್ದಿರುವುದು ಎಂದು ವಾದಿಸುತ್ತಿದ್ದಾರೆ.
ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇಬ್ಬರೂ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಿ ಬಂದವರು. ಅಲ್ಲಿಯೂ ಚೆನ್ನಾಗಿಯೇ ಆಟವಾಡಿದ್ದರು. ಈ ಸೀಸನ್ ನಲ್ಲೂ ಚೆನ್ನಾಗಿ ಆಡಿದ್ದಾರೆ. ಹಾಗಾಗಿ ಇಬ್ಬರ ಮಧ್ಯ ತೀವ್ರ ಪೈಪೋಟಿ ನಡೆದಿದೆ. ಅಧಿಕೃತವಾಗಿ ಟ್ರೋಫಿ ಗೆದ್ದವರು ಯಾರು ಎಂದು ಬಹಿರಂಗ ಪಡಿಸದೇ ಇದ್ದರೂ, ಇಬ್ಬರ ಹೆಸರು ಓಡಾಡುತ್ತಿದೆ. ಈ ಮೂಲಕ ಕನ್ಫ್ಯೂಸ್ ಮಾಡುವಂತ ಕೆಲಸವೂ ನಡೆದಿದೆ.

By admin

Leave a Reply

Your email address will not be published. Required fields are marked *

error: Content is protected !!