ಸುಳ್ಯದ ಜಾಲ್ಲೂರು – ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಮದುವೆ ದಿಬ್ಬಣ ಹೋಗುತ್ತಿದ್ದ ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಆ ವಾಹನದಲ್ಲಿದ್ದ ಸುಳ್ಯ ಮೂಲದ ತಾಯಿ ಮತ್ತು ಮಗು ಮೃತಪಟ್ಟು ನಾಲ್ವರು ತೀವ್ರ ಗಾಯಗೊಂಡ ಘಟನೆ ಇದೀಗ ನಡೆದಿದೆ .

ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ , ಪರಪ್ಪೆಯ ಶಾನ್ ಎಂಬವರ ಪತ್ನಿ ೨೮ ವರ್ಷದ ಶಾಹಿನಾ ಹಾಗೂ ಮಗು ೩ ವರ್ಷ ಪ್ರಾಯದ ಶಜಾ ಮೃತಪಟ್ಟಿದ್ದಾರೆ . ಇನೋವಾ ಕಾರಲ್ಲಿದ್ದ ಇನ್ನು ನಾಲ್ವರು ತೀವ್ರ ಗಾಯಗೊಂಡಿದ್ದು , ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ . ಮೃತಪಟ್ಟ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ತರಲಾಗಿದೆ .

By admin

Leave a Reply

Your email address will not be published. Required fields are marked *

error: Content is protected !!