ಮಂಗಳೂರು : ಮಂಗಳೂರು ನಗರದ ಕಂಕನಾಡಿ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಸ್ಪೋಟ ಸಂಭವಿಸಿದ್ದು , ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಆಟೋದಲ್ಲಿ ಚಾಲಕನೊಂದಿಗೆ ಮತ್ತೋರ್ವ ಇದ್ದು ಇಬ್ಬರು ಸ್ಪೋಟದಲ್ಲಿ ಗಾಯಗೊಂಡಿದ್ದು ನಗರದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಬಾಂಬ್ ನಿಷ್ಟ್ರೀಯ ದಳ , ಮತ್ತಿತರ ಜಾಗೃತಾ ದಳದವರು ಘಟನಾ ಸ್ಥಳಕ್ಕೆ ಧಾವಿಸಿದ್ದು ತನಿಖೆ ಆರಂಭಿಸಿದ್ದಾರೆ,

ಸುಟ್ಟ ಆಟೋದಲ್ಲಿ ಸ್ಪೋಟಗೊಂಡ ಅಡುಗೆ ಬಳಸುವ ಪ್ರೆಶರ್  ಕುಕ್ಕರ್ ಅವಶೇಷಗಳು ಕಂಡುಬಂದಿದ್ದು ಸ್ಪೋಟಕ ಸಾಗಿಸುತ್ತಿದ್ದ ಗುಮಾನಿ ವ್ಯಕ್ತವಾಗಿದೆ. ಹಲವು ಅನುಮಾನಗಳು ಎದ್ದಿವೆ.   ಇದರಿಂದ ನಗರದ ಜನ ಆತಂಕಿಂತರಾಗಿದ್ದಾರೆ. ಇನ್ನು ಸ್ಪೋಟದ ಬಗ್ಗೆ ಪ್ರತಿಕ್ರೀಯಿಸಿರುವ ಮಂಗಳೂರು ಪೊಲೀಸ್ ಕಮಿಷನರ್, ಚಲಿಸುತ್ತಿದ್ದ ಅಟೋದಲ್ಲಿ ನಿಗೂಢ ರೀತಿಯಲ್ಲಿ ಬ್ಲಾಸ್ಟ್ ಪ್ರಕರಣ ಆಗಿರುವುದು ನಿಜ.

ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಯಾರು ಆತಂಕಗೊಳ್ಳುವ ಅಗತ್ಯವಿಲ್ಲ . ಪ್ರಯಾಣಿಕ ಹಾಗೂ ಅಟೋ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಮನವಿ ಮಾಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!