ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತೆರವು ಆಗಿಲ್ಲ. ಕೇವಲ ಶಿಫ್ಟ್ ಆಗಿದೆಯಷ್ಟೆ. ಇದು ಮಂಗಳೂರಿನ ಜನತೆಯ ಯಶಸ್ಸು ಆಗಿದೆ. ಅಲ್ಲೇ ಮಲಗಿದವರಿಗೆ, ರಾತ್ರಿ ಹಗಲು ಊಟ ನಿದ್ದೆ ಬಿಟ್ಟು ಪ್ರತಿಭಟನೆ ಮಾಡಿದವರಿಗೆ, ಕೆಲಸ ಬಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ನಾವು ವಿಶೇಷವಾದ ಮಹತ್ವವನ್ನು ಕೊಡಬೇಕಾಗುತ್ತದೆ. ಇನ್ನು ಈ ಬಗ್ಗೆ ಸಂಸತ್ತಿನಲ್ಲಿ ಟೋಲ್ ಬಗ್ಗೆ ಮಾತನಾಡದವರು ಈಗ ಇದರ ರಾಜಕೀಯ ಲಾಭ ಪಡಿತಿದ್ದಾರೆ‌’ ಎಂದು ಶಾಸಕ ಯು.ಟಿ ಖಾದರ್ ಅವರು ವ್ಯಂಗ್ಯವಾಡಿದರು.

ಟೋಲ್‌ಗೇಟ್ ರದ್ದು ಕುರಿತು ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ಕೇಂದ್ರ ಸರ್ಕಾರ ಕೇವಲ ನೋಟಿಪಿಕೇಶನ್ ನೀಡಿದೆ‌. ಯು.ಟಿ ಖಾದರ್ ಮಂತ್ರಿ ಆಗಿದ್ದಾಗ ಏನು ಮಾಡಿದ್ದಾರೆ‌‌‌ ಎಮದು ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡುತ್ತಾರೆ. ಪಾಪ‌ ಭರತ್ ಶೆಟ್ಟಿ ಹೇಳಿಕೆಗೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ನೀಡಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾತನಾಡುವಾಗ ಆಲೋಚನೆ ಮಾಡಲಿ. ಇದರ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ನಾನೇ ಮಾತುಕತೆ ಮಾಡಿದ್ದೆ. ಎಂಟು ವರ್ಷ ಇವ್ರು ಏನು‌ ಮಾಡಿದ್ದಾರೆ…? ಮಂಗಳೂರಿನ ಜನತೆ ಅಹೋರಾತ್ರಿ ಹೋರಾಟ ಮಾಡುವಾಗ ಇವರು ಎಲ್ಲಿ ಇದ್ರು. ಜನ್ರ ಸಮಸ್ಯೆಗೆ ಇವ್ರು ಹೋಗಿ ಸ್ಪಂದಿಸಿದ್ರಾ? ಇವ್ರಿಗೆ ಯಾಕೆ ಸಚಿವರ ಭಯ, ಜನರ ಸಮಸ್ಯೆಗೆ ಸ್ಪಂದಿಸಲು ಭಯ..?

ಈ ಯೋಜನೆ 75 ಕೇಂದ್ರ ಸರ್ಕಾರ ಮತ್ತು ಎನ್ಎಂಪಿಟಿ ಜಂಟಿಯಲ್ಲಿ ಆಗಿದೆ. ಇದು ಬಿಓಬಿ ಯೋಜನೆ ಅಡಿ ಆಗಿಲ್ಲ. 36ಕಿಮೀ 364 ಕೋಟಿಗೆ ಕಾಮಗಾರಿ ಯೋಜನೆ ಆಗಿದೆ. 130 ಕೋಟಿ ಟೋಲ್ ಇನ್ನೂ ಕೂಡಾ ಬರಬೇಕಿದೆ ಎಂಬುದು ಟೋಲ್ ನವರ ವಾದ. ಯಾರೋ ಒಬ್ಬನಿಗೆ ಎಷ್ಟು ಕೋಟಿಗೆ ಇವ್ರು ಟೋಲ್ ಟೆಂಡರ್ ಕೊಟ್ರು. 2013ರಲ್ಲಿ ಎಂಪಿ ಯಾರು, ಉಡುಪಿ ಎಂಪಿ ಯಾರು..? ಯಾಕೆ ಆಗ ಅವ್ರು ಧ್ವನಿ ಎತ್ತಲಿಲ್ಲ. ಯಾಕೆ ಎಂಪಿ ಎಂಎಲ್‌ಎ ಡೆಲ್ಲಿಗೆ ಹೋಗಿ ಕೂತಿಲ್ಲ. ನಮ್ಮದು ಊರು ಕುಟ್ಟುವ ಜನ್ರನ್ನು ಕಟ್ಟುವ ಕೆಲಸ. ಅವ್ರದ್ದು ಜನ್ರನ್ನು ಮನಸ್ಸನ್ನು ಹೊಡೆಯುವ ಕೆಲಸ. ಅವ್ರು ಅವ್ರ ಕೆಲಸ ಮಾಡ್ತಾ ಹೋಗ್ತಾರೆ ನಾವು ಕಟ್ಟುತ್ತಾ ಹೋಗುತ್ತೇವೆ‌’ ಎಂದು ವಾಗ್ದಾಳಿ ನಡೆಸಿದರು.

By admin

Leave a Reply

Your email address will not be published. Required fields are marked *

error: Content is protected !!