ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಬೆಲೆಯಲ್ಲಿ115 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಆದರೆ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಇಂದಿನಿಂದ 115 ರೂ.ಗಳಷ್ಟು ಇಳಿಕೆಯಾಗಿದೆ.

ತೈಲ ಕಂಪನಿಗಳು ಈ ತಿಂಗಳ ದರ ಪರಿಷ್ಕರಣೆ ಮಾಡಿದ್ದು, ಹೀಗಾಗಿ ದೆಹಲಿಯಲ್ಲಿ 115.5 ರೂ, ಕೋಲ್ಕತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ., ಚೆನ್ನೈನಲ್ಲಿ 116.5 ರೂ. ಇಳಿಕೆಯಾಗಿದೆ. ಅಕ್ಟೋಬರ್ 1 ರಂದು, ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 25 ರೂ.ಗಳಷ್ಟುಕಡಿಮೆ ಮಾಡಲಾಗಿತ್ತು.

By admin

Leave a Reply

Your email address will not be published. Required fields are marked *

error: Content is protected !!