ಬೆಂಗಳೂರು: ನಿಷೇಧಿತ ಐಸಿಸ್‌ ಸಂಘಟನೆಗೆ ಸಹಾಯ, ಭಯೋತ್ಪಾದನೆ ಕೃತ್ಯ, ಕೋಮುಸೌಹಾರ್ದ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆರೋಪದಲ್ಲಿ ಬಂಧನಕ್ಕೊಳಗಾದ ಪಿಎಫ್ಐ ಸಂಘ ಟನೆ ಮುಖಂಡರು, ಮತಾಂತರ ಮತ್ತು ನಿರ್ದಿಷ್ಟ ಸಮುದಾಯದ ಯುವಕರನ್ನು “ಚೈನ್‌ಲಿಂಕ್‌’ ಸಂಘಟನೆಗೆ ಸೇರಿಸಿಕೊಂಡು “ಉಗ್ರವಾದ’ದ ಬಗ್ಗೆ ಪ್ರಚೋದನೆ ನೀಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಂಧಿತರ ವಿಚಾರಣೆಯಲ್ಲಿ ಈ ಅಂಶಗಳು ಪತ್ತೆಯಾಗಿವೆ.

ಅದರಲ್ಲೂ ಬೆಂಗಳೂರು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಭಾಗದ ಪಿಎಫ್ಐ ಕಾರ್ಯಕರ್ತರು, ತಮ್ಮ ಸಮುದಾಯದ ಮೇಲಿನ ದೌರ್ಜನ್ಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತೀಕಾರಕ್ಕಾಗಿ ಹವಣಿಸುತ್ತಿದ್ದರು.ಮತ್ತೊಂದೆಡೆ ವಿದೇಶ ಮತ್ತು ಕೇರಳ ಭಾಗದಿಂದ ಬರುತ್ತಿದ್ದ ಕೋಟ್ಯಂತರ ರೂ. “ಹವಾಲಾ’ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿ ಕೊಳ್ಳು  ತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಚೈನ್‌ಲಿಂಕ್‌ ಮಾದರಿ ಸೇರ್ಪಡೆ:
ಪಿಎಫ್ಐ ಸಂಘಟನೆಗೆ ಸೇರುತ್ತಿದ್ದ ವರಿಗೆ ಒಂದು ಟಾಸ್ಕ್ ಕೊಡಲಾಗುತ್ತಿತ್ತು. ಚೈನ್‌ಲಿಂಕ್‌ ಮಾದರಿಯಲ್ಲಿ ಯುವಕರನ್ನು ಸಂಘಟನೆಗೆ ಸೇರಿಸಬೇಕೆಂದು ಸೂಚಿಸಲಾಗುತ್ತಿತ್ತು. ಒಬ್ಬ ಯುವಕ ಸಂಘಟನೆಗೆ ಸೇರಿಕೊಂಡರೆ, ಆತ ಮತ್ತೆ ನಾಲ್ಕು ಮಂದಿಯನ್ನು ಸೇರಿಸಬೇಕು. ಅಗತ್ಯಬಿದ್ದಲ್ಲಿ ಸಂಘಟನೆ ಸೇರುವ ಯುವಕರಿಗೆ ಆರ್ಥಿಕ ಸಹಾಯದ ಭರವಸೆ ಕೊಡಲಾಗುತ್ತಿತ್ತು. ಹೀಗಾಗಿ ನಾಲ್ಕೈದು ವರ್ಷಗಳಿಂದ ಅತಿ ಹೆಚ್ಚು ಯುವಕರು ಸಂಘಟನೆ ಸೇರಿಕೊಳ್ಳುತ್ತಿದ್ದರು.

ವಿದ್ಯಾವಂತ ಯುವಕರು ಮತ್ತು ಬಡ ಯುವಕರನ್ನು ಪ್ರತ್ಯೇಕವಾಗಿಸಿ, ಧಾರ್ಮಿಕ ಕೇಂದ್ರಗಳಿಗೆ ಕರೆದೊಯ್ದು ಸಮುದಾಯದ ಬಗ್ಗೆ ಹೆಚ್ಚಿನ ಬೋಧನೆ ನೀಡುತ್ತಿದ್ದರು. ಬಳಿಕ ವಿದ್ಯಾವಂತರಿಗೆ ಆನ್‌ಲೈನ್‌ ಅಥವಾ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಹಾಗೂ ಇತರ ತರ ಬೇತಿ ನೀಡಿದರೆ, ಬಡ ಯುವಕರಿಗೆ ಹಣದ ಪ್ರಚೋದನೆ ನೀಡಿ, ಕೇರಳದ ಕಣ್ಣೂರು, ವಯನಾಡಿನ ನಿರ್ಜನ ಪ್ರದೇಶದಲ್ಲಿ ಕ್ಯಾಂಪ್‌ಗ್ಳನ್ನು ಹಾಕಿ ಶಸ್ತ್ರಾಸ್ತ್ರ ಮತ್ತು ಮಾರಕಾಸ್ತ್ರಗಳ ತರಬೇತಿ ನೀಡುತ್ತಿದ್ದರು. ಉತ್ತಮ ತರಬೇತಿ ಪಡೆದ ಯುವಕರನ್ನು ಮತ್ತೂಂದು ಸಮುದಾಯದ ಮುಖಂಡರ ವಿರುದ್ಧ ಎತ್ತಿ ಕಟ್ಟು ವಂತಹ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಹತ್ಯೆಗೂ ಪ್ರಚೋದನೆ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಎಸ್‌ಡಿಪಿಐ ಸಂಘಟನೆ ಸದಸ್ಯತ್ವ, ಪಿಎಫ್ಐನಲ್ಲಿ ಕೆಲಸ
ಪೊಲೀಸರು ಮತ್ತು ತನಿಖಾ ಸಂಸ್ಥೆಗಳ ಕಣ್ಣೊರೆಸಲು ಎಸ್‌ಡಿಪಿಐನಲ್ಲಿ ಸದಸ್ಯರಾಗಿ ಪಿಎಫ್ಐನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಧ್ಯೆ ಪಿಎಫ್ಐ ನಿಷೇಧಿಸಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ವ್ಯಕ್ತಿಗಳ ಬಗ್ಗೆಯೂ ರಾಜ್ಯ ಮತ್ತು ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.

ಅಲ್‌ ಕಾಯಿದಾ ಸಂಘಟನೆ ಸಂಪರ್ಕ
ಇತ್ತೀಚೆಗೆ ಬೆಂಗಳೂರಿನಲ್ಲಿ ಎನ್‌ಐಎಯಿಂದ ಬಂಧನಕ್ಕೊಳಗಾದ ಪಿಎಫ್ಐ ಮುಖಂಡರಿಗೆ ಪರೋಕ್ಷವಾಗಿ ಅಲ್‌ ಕಾಯಿದಾ ಸಂಘಟನೆ ಸಂಪರ್ಕ ಇದೆಯೇ? ಎಂಬ ಬಗ್ಗೆ ದಿಲ್ಲಿ ಎನ್‌ಐಎ ತನಿಖೆ ಮುಂದುವರಿಸಿದೆ. ಕೆಲ ದಿನಗಳ ಹಿಂದೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಲ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಸ್ಸಾಂನ ಪಿಎಫ್ಐ ರಾಜ್ಯಾಧ್ಯಕ್ಷ ಅಮಿನುಲ್ಲಾ ಹಕ್ಯೂ ಮತ್ತು ಪಶ್ಚಿಮ ಬಂಗಾಳ ವಿಭಾಗ ಮುಖ್ಯಸ್ಥ ಡಾ| ಮಿನರುಲ್‌ ಶೇಕ್‌ ಎಂಬವರನ್ನು ಬಂಧಿಸಲಾಗಿದೆ. ಈ ವೇಳೆ ಇಬ್ಬರಿಗೂ ಅಲ್‌ ಕಾಯಿದಾ ಮತ್ತು ಬಾಂಗ್ಲಾದೇಶದ ಅಸ್ಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಜತೆ ಸಂಪರ್ಕ ಇತ್ತು ಎಂಬುದು ಪತ್ತೆಯಾಗಿತ್ತು. ಈ ಪೈಕಿ ಶೇಖ್‌ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿದ್ದ. ಈತ ಅಸ್ಸಾಂ ಜತೆ ಈಶಾನ್ಯ ರಾಜ್ಯಗಳ ಉಸ್ತುವಾರಿ ಕೂಡ ನೋಡಿಕೊಳ್ಳುತ್ತಿದ್ದ. ಈತ 2019ರಲ್ಲಿ ಅಸ್ಸಾಂನಲ್ಲಿ ನಡೆದ ಸಿಎಎ ಪ್ರತಿಭಟನೆಗೆ ಆರ್ಥಿಕ ಸಹಾಯ ಮಾಡಿದ್ದ. ಈತನ ಜತೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಏಳು ಮಂದಿಯ ಪೈಕಿ ಕೆಲವರು ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!