ಮಂಗಳೂರು: ನವರಾತ್ರಿ ಹಾಗೂ ದಸರಾ ಪ್ರಯುಕ್ತ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್‌ ಆಯುಕ್ತರೂ ಆಗಿರುವ ಅಪರ ದಂಡಾಧಿಕಾರಿ ಎನ್‌.ಶಶಿಕುಮಾರ್‌ ಸೆ.30ರಿಂದ ಅ. 6ರ ವರೆಗೆ ಮಂಗಳಾದೇವಿ ದೇವಸ್ಥಾನದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶಿಸಿದ್ದಾರೆ.

ಬದಲಿ ವ್ಯವಸ್ಥೆ ವಿವರ
ಮಂಗಳೂರು- ಮಾರ್ನೆಮಿಕಟ್ಟೆ ಒಂದನೇ ಬ್ರಿಡ್ಜ್‌ ಕಡೆಯಿಂದ ಮಂಗಳಾದೇವಿ ಕಡೆಗೆ ಬರುವ ರೂಟ್‌ ನಂಬರ್‌ 27ರ ಬಸ್‌ಗಳು ಕಾಸಿಯಾ ಜಂಕ್ಷನ್‌ ಮೂಲಕ ಮಂಗಳಾದೇವಿ ಕಡೆಗೆ ಮೋರ್ಗನ್ಸ್‌ಗೇಟ್‌ ಕಡೆಯಿಂದ ಮುಳಿಹಿತ್ಲು ಜಂಕ್ಷನ್‌ ಮೂಲಕ ಮಂಗಳಾದೇವಿ ಕಡೆಗೆ ಬರುವ ರೂಟ್‌ ನಂಬರ್‌ 4ಸಿ, 4ಎಫ್‌, 6ಡಿ, 11ಸಿ, 14ಸಿ, 15, 15ಎ ಬಸ್‌ಗಳು ಜೆಪ್ಪು ಮಾರ್ಕೆಟ್‌ನಿಂದ ಕಾಸಿಯಾ ಜಂಕ್ಷನ್‌ ಮೂಲಕ ಮಂಗಳಾದೇವಿ ಕಡೆಗೆ ಬಂದು ಕಾಂತಿ ಚರ್ಚ್ ಮುಂಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ಅದೇ ರಸ್ತೆಯಲ್ಲಿ ಏಕಮುಖವಾಗಿ ಮುಂದಕ್ಕೆ ಮುಳಿಹಿತ್ಲುಕ್ರಾಸ್‌ ರಸ್ತೆಯಲ್ಲಿ ಮುಂದುವರಿದು ಮೋರ್ಗನ್ಸ್‌ಗೇಟ್‌ ಮುಖಾಂತರ ಮುಂದಕ್ಕೆ ಚಲಿಸುವುದು.

ಮೋರ್ಗನ್ಸ್‌ಗೇಟ್‌ ಕಡೆಯಿಂದ ಮುಳಿಹಿತ್ಲು ಮೂಲಕ ಮಂಗಳಾದೇವಿ ದೇವಸ್ಥಾನದ ಕಡೆಗೆ ಎಲ್ಲ ಬಸ್‌ಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಮಂಕಿ ಸ್ಟ್ಯಾಂಡ್‌ ಕಡೆಯಿಂದ ಮಂಗಳಾದೇವಿ ದೇವಸ್ಥಾನದ ಕಡೆಗೆ ಎಲ್ಲರೀತಿಯ ಸರಕು ಸಾಗಾಟ ವಾಹನಗಳ ಪ್ರವೇಶವನ್ನು ಸೆ.30ರಿಂದ ಅ.6ರ ವರೆಗೆ ನಿಷೇಧಿಸಲಾಗಿದೆ. ಈ ಎಲ್ಲ ಸರಕು ವಾಹನಗಳು ಮಂಕಿ ಸ್ಟ್ಯಾಂಡ್‌, ಮಾರ್ನಮಿಕಟ್ಟೆ 1ನೇ ಕ್ರಾಸ್‌, ಬ್ರಿಡ್ಜ್‌ ಮೂಲಕ ಮುಂದಕ್ಕೆ ಸಾಗಬೇಕು. ಮೋರ್ಗನ್ಸ್‌ಗೇಟ್‌ ಕಡೆಯಿಂದ ಮಂಗಳಾದೇವಿ ಕಡೆಗೆ ಸಂಚರಿಸುವ ಎಲ್ಲ ಸರಕು ಸಾಗಾಟ ವಾಹನಗಳು ಬೋಳಾರ ರಸ್ತೆ ಮೂಲಕ ಸ್ಟೇಟ್‌ ಬ್ಯಾಂಕ್‌ ಕಡೆಗೆ ಸಂಚರಿಸಬೇಕು.

By admin

Leave a Reply

Your email address will not be published. Required fields are marked *

error: Content is protected !!