ಪಣಜಿ: ಅಸ್ವಸ್ಥಳಾಗಿರುವ ಪತ್ನಿ ತನ್ನ ಅಂಗವಿಕಲ ಮಗಳಿಗೆ ಆಹಾರ ನೀಡಲಾಗುತ್ತಿರಲಿಲ್ಲ. ಇದರಿಂದ ಬೇಸರಗೊಂಡ ದಿನಗೂಲಿ ಕಾರ್ಮಿಕನೊಬ್ಬರು ಮಗಳಿಗೆ ಆಹಾರ ನೀಡುವುದಕ್ಕಾಗಿ ರೋಬೋಟ್ ಅನ್ನು ಕಂಡುಹಿಡಿದಿದ್ದಾರೆ.

ಗೋವಾ ಸ್ಟೇಟ್ ಇನೋವೇಶನ್ ಕೌನ್ಸಿಲ್, ಬಿಪಿನ್ ಕದಮ್ ಅವರ ಆವಿಷ್ಕಾರಕ್ಕಾಗಿ ಅವರನ್ನು ಶ್ಲಾಘಿಸಿದೆ ಮತ್ತು ಯಂತ್ರದಲ್ಲಿ ಮತ್ತಷ್ಟು ಕೆಲಸ ಮಾಡಲು ಮತ್ತು ಅದರ ವಾಣಿಜ್ಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಅವರಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ.

ಬಿಪಿನ್ ತಮ್ಮ ರೋಬೋಟ್‌ಗೆ ‘ಮಾ ರೋಬೋಟ್’ ಎಂದು ಹೆಸರಿಟ್ಟಿದ್ದಾರೆ. ಬಿಪಿನ್ ಅವರ ಮಗಳಿಗೆ ಕೈಗಳನ್ನು ಎತ್ತಲು ಸಹ ಶಕ್ತಿಯಿಲ್ಲ. ಹೀಗಾಗಿ ಆಕೆಗೆ ಬೇಕಾದ ಆಹಾರವನ್ನು ರೋಬೋಟ್‌ನ ಭಾಗವಾದ ತಟ್ಟೆಯಲ್ಲಿಟ್ಟರೆ, ಅದನ್ನು ಬಾಯಿಗೆ ಕೊಡುವ ಕೆಲಸವನ್ನು ‘ಧ್ವನಿ ಕಮಾಂಡ್’ ತಂತ್ರಜ್ಞಾನವನ್ನು ಆಧರಿಸಿ ರೋಬೋಟ್ ಮಾಡುತ್ತದೆ.

ದಕ್ಷಿಣ ಗೋವಾದ ಪೊಂಡಾ ತಾಲೂಕಿನ ಬೇಥೋರಾ ಗ್ರಾಮದ ನಿವಾಸಿಯಾಗಿರುವ ಕದಂ ಅವರು 40 ವರ್ಷದವರಾಗಿದ್ದು, ಯಾವುದೇ ತಾಂತ್ರಿಕ ಜ್ಞಾನವನ್ನು ಹೊಂದಿಲ್ಲ. ಇವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

‘ತನ್ನ 14 ವರ್ಷದ ಮಗಳು ಅಂಗವಿಕಲಳು ಮತ್ತು ಸ್ವಂತವಾಗಿ ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಆಕೆ ಊಟಕ್ಕಾಗಿ ತನ್ನ ತಾಯಿಯ ಮೇಲೆ ಅವಲಂಬಿತಳಾಗಿದ್ದಳು. ಎರಡು ವರ್ಷಗಳ ಹಿಂದೆ ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಳು. ನಮ್ಮ ಮಗಳಿಗೆ ಊಟ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ನಾನು ಏನಾದರೂ ಮಾಡಬೇಕಾಯಿತು’ ಎನ್ನುತ್ತಾರೆ ಬಿಪಿನ್ ಕದಂ.

By admin

Leave a Reply

Your email address will not be published. Required fields are marked *

error: Content is protected !!