ಮಂಗಳೂರು : ನಗರದ ರಿಲಯಾನ್ಸ್ ಜಿಯೋ ಇನ್ಪೋಕಾಮ್ ಲಿಮಿಟೆಡ್ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 18,000 ರೂ.ಗಳ ವೇತನದೊಂದಿಗೆ ಇತರೆ ಭತ್ಯೆಗಳನ್ನೊಳಗೊಂಡ ಹೋಮ್ ಸೇಲ್ಸ್ ಆಫಿಸರ್, ಜಿಯೋ ಪಾಯಿಂಟ್ ಅಸಿಸ್ಟೆಂಟ್ ಮ್ಯಾನೆಜರ್, ಜಿಯೋ ಫೈಬರ್ ಎಂಜಿನಿಯರ್ಸ್ ಹಾಗೂ ಜಿಯೋ ಫೈಬರ್ ಅಸೋಸಿಯೇಟ್ಸ್ ಸೇರಿದಂತೆ 30ಕ್ಕೂ ಅಧಿಕ ಹುದ್ದೆಗಳಿಗೆ ಸೆ.14ರ ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ನೇರ ಸಂದರ್ಶನವನ್ನು ನಗರದ ಲಾಲ್ ಬಾಗ್ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

32 ವರ್ಷ ವಯಸ್ಸಿನ ಒಳಗಿನ ಪಿ.ಯು.ಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಆಸಕ್ತ ಪುರುಷ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!