ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸಿದ್ದತೆ ಜೋರಾಗಿದೆ. ಈ ನಡುವೆ ಭದ್ರತೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದುಕೊಂಡಿದ್ದಾರೆ. ಸಾರ್ವಜನಿಕರು ತಪ್ಪು ನಡೆ ತೋರಿದ್ದಲ್ಲಿ ಅವರ ಮೇಲೆ ಕೈ ಮಾಡುವಂತಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸಿದ್ಧತೆ, ಭದ್ರತೆ ಪರಿಶೀಲನೆ ನಡೆಸಿ ಪೊಲೀಸ್ ಸಿಬ್ಬಂದಿಗಳ ಜೊತೆ ಅವರು ಮಾತುಕತೆ ನಡೆಸಿದರು. ಅವರನ್ನು ಸಮಾಧಾನದಿಂದಲೇ ಕರೆದುಕೊಂಡು ಸಂಬಂಧಿಸಿದವರಿಗೆ ಹಸ್ತಾಂತರಿಸಿ ಎಂದರು. ಪೊಲೀಸರು ಮೊಬೈಲ್ ನಲ್ಲಿ ಮಾತಾಡೋದು, ಸೆಲ್ಪಿ ತೆದೆಯುವುದಕ್ಕೆ ಅವಕಾಶವಿಲ್ಲ. ಪ್ರಧಾನಿ ಮೋದಿ ಭಾಷಣದ ರೆಕಾರ್ಡ್ ಮಾಡೋಕೆ ಅವಕಾಶವಿಲ್ಲ. ಸಾರ್ವಜನಿಕರನ್ನು ತಮ್ಮ ಜಾಗದಿಂದ ಗಮನಿಸುತ್ತಿರಿ
ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಅಲರ್ಟ್ ಆಗಿರಿ ಎಂದು ಸೂಚಿಸಿದರು.

ಪ್ರತಿ ಬ್ಲಾಕ್ ಗಳಲ್ಲಿ ವೀಡಿಯೋ ಗ್ರಾಫರ್ ನಿಯೋಜಿಸಿ. ಪ್ರತೀ ಬ್ಲಾಕ್ ನಲ್ಲೂ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಉಪಕರಣದೊಂದಿಗೆ ಸಿದ್ಧರಿರಬೇಕು. ಪೊಲೀಸ್ ಸಿಬ್ಬಂದಿಗಳಿಗೆ ಭದ್ರತೆಯ ಕ್ಲಾಸ್ ತೆಗೆದುಕೊಂಡ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!