FCI Recruitment 2022: ಭಾರತೀಯ ಆಹಾರ ನಿಗಮ (FCI) ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಫ್​ಸಿಐನ ವಿವಿಧ ವಲಯಗಳಲ್ಲಿನ ಮ್ಯಾನೇಜರ್ (ಜನರಲ್ / ಡಿಪೋ / ಅಕೌಂಟ್ / ಟೆಕ್ನಿಕಲ್ / ಸಿವಿಲ್ ಇಂಜಿನಿಯರಿಂಗ್ / ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್) ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್‌ಸೈಟ್ fci.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

ಒಟ್ಟು ಹುದ್ದೆಗಳು- 113

ವಿಭಾಗೀಯವಾರು ಹುದ್ದೆಗಳು:

ಉತ್ತರ ವಲಯ: 38 ಹುದ್ದೆಗಳು
ದಕ್ಷಿಣ ವಲಯ: 16 ಹುದ್ದೆಗಳು
ಪಶ್ಚಿಮ ವಲಯ: 20 ಹುದ್ದೆಗಳು
ಪೂರ್ವ ವಲಯ: 21 ಹುದ್ದೆಗಳು
ಈಶಾನ್ಯ ವಲಯ: 18 ಹುದ್ದೆಗಳು
ಅರ್ಹತಾ ಮಾನದಂಡ:

ಮ್ಯಾನೇಜರ್ (ಸಾಮಾನ್ಯ) ಹುದ್ದೆ: ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ CA/ICWA/CS ಮಾಡಿರಬೇಕು. ಇನ್ನು SC/ST/ PwBD ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳಲ್ಲಿ ವಿನಾಯಿತಿ ನೀಡಲಾಗಿದ್ದು, ಅದರಂತೆ 55% ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮ್ಯಾನೇಜರ್ (ಡಿಪೋ) ಹುದ್ದೆ: ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ CA/ICWA/CS ಮಾಡಿಬೇಕು. ಇನ್ನು 55% ಹೊಂದಿರುವ SC/ST/ PwBD ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 28 ವರ್ಷಗಳಿಗಿಂತ ಹೆಚ್ಚಿರಬಾರದು. ಇದಾಗ್ಯೂ ಕೆಲ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕವಾಗಿ ರೂ 800 ಪಾವತಿಸಬೇಕಾಗುತ್ತದೆ. ಇನ್ನು SC / ST / PWBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 26, 2022

ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು Fci.gov.in ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.

By admin

Leave a Reply

Your email address will not be published. Required fields are marked *

error: Content is protected !!