ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ ಶ್ರೀ ಮಹಮ್ಮಾಯೀ ಭಜನಾ ಮಂದಿರದ ವಠಾರದಲ್ಲಿ ಜರುಗಿತು.
ವಿಶೇಷ ಭಜನಾ ಸೇವೆ ನಡೆಸಲಾಗಿದ್ದು, ಈ ಸಮಯ ಪುಟಾಣಿ ಮಕ್ಕಳು ರಾಧಾಕೃಷ್ಣ ವೇಷಧಾರಿಗಳಾಗಿ ಭಜನೆಗೆ ಹೆಜ್ಜೆ ಹಾಕಿದರು. ವಿಶೇಷವಾಗಿ ಪುಟಾಣಿ ಮಕ್ಕಳಿಗೆ ಶ್ಲೋಕ ಹೇಳುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಭಕ್ತಿಗೀತೆ, ಕೊಡಪಾನಕ್ಕೆ ಚೆಂಡು ಹಾಕುವುದು, ಬಾಲ್ ಪಾಸಿಂಗ್, ಮಡಕೆ ಒಡೆಯುವುದು, ಭಕ್ತಿಗೀತೆ, ರಂಗೋಲಿ, ಹಗ್ಗಜಗ್ಗಾಟ, ತ್ರೋಬಾಲ್, ವಾಲಿಬಾಲ್, ಬಲೂನ್ ಒಡೆಯುವುದು ಮುಂತಾದ ಸ್ಪರ್ಧೆಗಳನ್ನು ನಡೆಸಲಾಯ್ತು.
ಸಾಮಾನ್ಯ ಜ್ಞಾನ ಪ್ರಶ್ನೆ ಕೇಳುತ್ತಾ, ಉತ್ತರಿಸಿದವರಿಗೆ ಸ್ಥಳದಲ್ಲೇ ಬಹುಮಾನ ನೀಡಲಾಯ್ತು.
ಪುಟಾಣಿ ಮಕ್ಕಳು, ಮಹಿಳೆಯರು ಹಾಗು ಪುರುಷರು ಸ್ಪರ್ಧೆಯಲ್ಲಿ ಪಾಲ್ಗೊಂಡು ಖುಷಿ ಪಟ್ಟರು.
ಊಟ ಉಪಹಾರಕ್ಕೆ ಸುಮಾರು ಹದಿಮೂರು ಮನೆಯರು ಅವರ ಮನೆಯಲ್ಲೇ ತಯಾರಿಸಿ ತಂದ ಬಗೆಬಗೆಯ ತಿನಿಸು (ಖಾದ್ಯ) ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು.
ಸ್ಪರ್ಧಾ ಕಾರ್ಯಕ್ರಮಕ್ಕೆ ಮಂಡಳಿಯ ಅಧ್ಯಕ್ಷರಾದ ಪುರುಷೋತ್ತಮ ನಾಯ್ಕ್ ಕುಂಟ್ರಕಲ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

By admin

Leave a Reply

Your email address will not be published. Required fields are marked *

error: Content is protected !!