ಕಡಲತೀರದ ಕಾರವಾರದಲ್ಲಿ (White Cobra) ನಿಸರ್ಗದತ್ತ ವಿಸ್ಮಯಗಳಿಗೆ ಕೊರತೆಯೇನೂ ಇಲ್ಲ. ಆಗಾಗ ಅಲ್ಲಲ್ಲಿ ಚಿತ್ರ ವಿಚಿತ್ರ ಪ್ರಾಣಿ ಪಕ್ಷಿಗಳು, ಜಂತುಗಳು ಕಂಡುಬರುತ್ತವೆ. ಅವು ಕಡಲಾಳದಷ್ಟೇ ವಿಸ್ಮಯವನ್ನುಂಟುಮಾಡುತ್ತದೆ. ತಾಜಾ ಆಗಿ ಅಪರೂಪದ ಬಿಳಿ ಹೆಬ್ಬಾವು (Karwar) ಪತ್ತೆಯಾಗಿದೆ. ಉತ್ತರ ಕನ್ನಡ ( Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದಲ್ಲಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಬಿಳಿ ಹೆಬ್ಬಾವು ಸಿಕ್ಕಿದೆ.

ಬಿಳಿ ಹೆಬ್ಬಾವು ಕಂಡು ಜನ ತಕ್ಷಣಕ್ಕೆ ಆತಂಕಗೊಂಡಿದ್ದಾರೆ. ಬಳಿಕ ಸಾವರಿಸಿಕೊಂಡು ಕೂಡಲೇ ಉರಗ ತಜ್ಞ ಪವನ್ ನಾಯ್ಕ‌ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಪವನ್ ನಾಯ್ಕ ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಹೆಬ್ಬಾವು ಬಿಳಿ ಬಣ್ಣವಿರಲು ಕಾರಣ ಮೆಲಾಲಿನ್ ಅಥವಾ ಪಿಗ್ಮೆಂಟ್‌ ಕೊರತೆಯಿಂದ ಚರ್ಮೆಕ್ಕೆ ಬಣ್ಣ ಬಂದಿರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಬಿಳಿ ಹೆಬ್ಬಾವು ಸಿಕ್ಕಿರುವ 2ನೆಯ ದಾಖಲೆ ಇದಾಗಿದೆ. ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ ಉರಗ ತಜ್ಞ ಪವನ್ ನಾಯ್ಕ ಅವರು ಅದನ್ನು ಕಾಡಿಗೆ ಬಿಟ್ಟುಬಂದಿದ್ದಾರೆ.

ಯಲ್ಲಾಪುರದ ಅರಣ್ಯವಲಯದಲ್ಲಿ ಹೊಸ ಪ್ರಬೇಧದ ಏಡಿ ಪತ್ತೆ:

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಣ್ಯವಲಯದಲ್ಲಿ ಹೊಸ ಪ್ರಬೇಧದ ಸಿಹಿ ನೀರಿನ ಏಡಿ ಪತ್ತೆಯಾಗಿತ್ತು. ಬಿಳಿ ಮೈ ಬಣ್ಣ ಮತ್ತು ನೇರಳೆ ಬಣ್ಣದ ಕಾಲುಗಳನ್ನ ಹೊಂದಿರುವ ಈ ಏಡಿಯನ್ನು ಘಾಟಿಯಾನ ದ್ವೀವರಣ(Ghatiana Dvivarna) ಎಂದು ಸೈಂಟಿಫಿಕ್ ಹೆಸರು ನಾಮಕರಣ ಮಾಡಲಾಗಿದೆ.

ಅತೀ ಸುಂದರವಾಗಿರುವ ಈ ಏಡಿ ನೋಡಲು ಗುಂಡನೇ ಕಪ್ಪು ಕಣ್ಣು, ಬಿಳಿ ಬಣ್ಣದ ಕೊಕ್ಕೆ, ನೇರಳೆ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಅಪರೂಪದ ಏಡಿಯಾಗಿದೆ. ಹೊಸ ಪ್ರಬೇಧದ ಏಡಿ ಕಂಡು ಅರಣ್ಯ ಅಧಿಕಾರಿಗಳು ತಮ್ಮ ಕ್ಯಾಮಾರದಲ್ಲಿ ಏಡಿಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ತಂಡದವರು ಈ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿ ನೀರಿನ ಏಡಿಯನ್ನು ಪತ್ತೆ ಹಚ್ಚಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!