ಉಡುಪಿ: ‘ಸರ್ಕಾರ ಬೇಕೋ ಹಿಂದುತ್ವ ಬೇಕೋ ಅಂದಾಗ ನಾವು ಸರ್ಕಾರವನ್ನು ಬದಿಗಿಟ್ಟು ಹಿಂದುತ್ವವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಬಿಜೆಪಿ ಪ್ರಾರಂಭ ಆದದ್ದೇ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು ಅಧಿಕಾರವನ್ನು ತ್ಯಜಿಸಿ ಜನಸಂಘವನ್ನು ಆರಂಭ ಮಾಡಿದ್ದು.

ಜನ ಸಂಘ ಮತ್ತು ಬಿಜೆಪಿಯ ಹುಟ್ಟು ಆರಂಭ ಆದದ್ದು ಬಲಿದಾನಗಳ ಮುಖಾಂತರ’ ಎಂದು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಒಂದು ಮನೆಯಲ್ಲಿ ಯಾವುದಾದ್ರೂ ಅಪಸ್ವರ ಇದ್ದದ್ದೇ. ತಂದೆ ಮಗನಿಗೆ ಬುದ್ಧಿ ಹೇಳ್ಬೇಕು, ಮಗ ತಂದೆಗೆ ಬುದ್ಧಿ ಹೇಳ್ಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರ ಭಾವನೆಯನ್ನು ನಾನು ಒಬ್ಬ ಶಾಸಕನಾಗಿ ಮಾತ್ರವಲ್ಲದೆ ಒಬ್ಬ ಕಾರ್ಯಕರ್ತನಾಗಿ ಗೌರವಿಸುತ್ತೇನೆ.

ಇವತ್ತು ನಮಗೆ ಅನಿವಾರ್ಯತೆ ಇಲ್ಲ. ನಾವು ಇವತ್ತು ಹಿಂದುತ್ವದ ಆಧಾರದಲ್ಲಿಯೇ ಸರ್ಕಾರವನ್ನು ನಡೆಸುತ್ತಿರೋದು. ಅದಕ್ಕಾಗಿಯೇ ನಾವು ಗೋಹತ್ಯೆ ನಿಷೇಧವನ್ನು ತಂದಿದ್ದು, ಮತಾಂತರ ನಿಷೇಧ ಕಾಯ್ದೆ ನಿಯಮವನ್ನು ತಂದಿದ್ದು. ಸರ್ಕಾರ ಉತ್ತಮ ಯೋಜನೆಗಳನ್ನು ಮಾಡುತ್ತಲೇ ಇರುತ್ತದೆ. ಪ್ರಧಾನಿಯ ನವಭಾರತ ಕನಸನ್ನು ನನಸು ಮಾಡಲು ನಾವು ನವಕರ್ನಾಟಕದ ಮುಖೇನ ಕೊಟ್ಟೆ ಕೊಡ್ತೇವೆ.

ಬೆಳ್ಳಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದರ ಹಿಂದಿರುವ ಎಲ್ಲರ ಕೈವಾಡದ ಬಗ್ಗೆ ಸುಳಿವು ಸಿಕ್ಕಿದೆ ಎನ್ನುವದನ್ನು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಎಲ್ಲಾ ರೀತಿಯ ತನಿಖೆಗೆ ನಾವು ಮುಕ್ತವಾಗಿ ಅವಕಾಶವನ್ನು ಕೊಟ್ಟಿದ್ದೇವೆ. ನನಗೆ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಇದೆ . ಪ್ರಕರಣದ ನಿಜವಾದ ಹಂತಕರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡುತ್ತಾರೆ. ಇಡೀ ದೇಶದಲ್ಲಿ ಜಿಹಾದಿಗಳ ಹಿಂಸಾಚಾರ ಕೇವಲ ದ.ಕ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ.

ರಾಜ್ಯದ ಹತ್ತು ಜಿಲ್ಲೆಗಳ ಮೇಲೆ ಇದು ವಿಸ್ತರಿಸುವುದನ್ನು ನಾವು ಕಂಡಿದ್ದೇವೆ. ಮೊದಲಿಗೆ ಕೇವಲ ಕಾಶ್ಮೀರದಲ್ಲಿ ಮಾತ್ರ ಸೀಮಿತವಾಗಿದ್ದ ಈ ಹಿಂಸಾಚಾರ ಇಂದು ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ ಅದರಲ್ಲೂ ಕರಾವಳಿಗೆ ಕೂಡಾ ವ್ಯಾಪಿಸಿದೆ. ಅಹಿತಕರ ಘಟನೆಗೆ ಕಾರಣವಾಗುವ ಎಲ್ಲರನ್ನು ಸರ್ಕಾರ ಮಟ್ಟ ಹಾಕುತ್ತೆ. ಮತ್ತು ಇಂತಹ ಜಿಹಾದಿ ಶಕ್ತಿಗಳ ವಿರುದ್ಧ ಸಮಾಜ ಒಂದಾಗಬೇಕಿದೆ. ಬಿಜೆಪಿ ಇವತ್ತು ಸಬ್‌ಕಾ ಸಾಥ್ ಸಬ್‌ ಕಾ ವಿಕಾಸ್ ಸಿದ್ಧಾಂತದಲ್ಲಿ ನಡೀತ್ತಿದೆ.

ಈ ರಾಷ್ಟ್ರೀಯತೆಯ ವಿಷಯವನ್ನು ಕೇವಲ ಹಿಂದೂಗಳು ಮಾತ್ರ ಅಲ್ಲ. ಎಲ್ಲ ವರ್ಗದವರು ಕೂಡಾ ಒಪ್ಕೊಂಡಿದ್ದಾರೆ. ಅಂದ್ರೆ ಬಿಜೆಪಿ ಕೇವಲ ಹಿಂದೂಗಳಿಗೆ ಮಾತ್ರ ಅಂದ್ರೆ ಕಾಂಗ್ರೆಸ್ಸಿಗರಿಗೆ ಕೇವಲ ಮುಸಲ್ಮಾನರು ಮಾತ್ರ ಇದ್ದ ಹಾಗೆ. ಕಾಂಗ್ರೆಸ್ ಅದನ್ನೂ ಒಪ್ಪಿಕೊಳ್ಳಬೇಕು ಹಾಗಾದ್ರೆ ನಮಗೆ ಮುಸಲ್ಮಾನರು ಮಾತ್ರ ಅಂತ. ಹಾಗೇನು ಅನ್ಸಲ್ಲ. ಯಾವುದೋ ಟೀಕೆಗಳು ಬಂದಿದೆ, ಆಕ್ರೋಶಗಳು ಬಂದಿದೆ ಅಂತ ರಾಷ್ಟ್ರೀಯತರಯಲ್ಲಿ ವಿಮುಖರಾಗುವ ಪ್ರಶ್ನೆಯೇ ಇಲ್ಲ. ಜಿಹಾದಿಗಳ ಕುತ್ತಂತ್ರವನ್ನು ನಾವು ಸಮಾಜದ ಮುಂದೆ ಇಡುತ್ತೇವೆ. ಸಮಾಜ ಜಾಗೃತರಾಗಬೇಕು. ಅದು ಆಗಿಲ್ಲ ಅಂದ್ರೆ ಸರ್ಕಾರ ಏನೂ ಮಾಡ್ಲಿಕ್ಕೆ ಆಗಲ್ಲ’ ಎಂದು ಹೇಳಿದರು.

By admin

Leave a Reply

Your email address will not be published. Required fields are marked *

error: Content is protected !!