ಬೆಂಗಳೂರು: ನಟ ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀ ದೇವಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲಕ್ಷ್ಮೀ ದೇವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಕಳೆದ 22 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಟ ಶಕ್ತಿ ಪ್ರಸಾದ್ ಪತ್ನಿ ಲಕ್ಷ್ಮೀ ದೇವಿ ಅವರು ಆರ್ಟ್ ಟೀಚರ್ ಆಗಿದ್ದರಂತೆ. ಲಕ್ಷ್ಮೀ ದೇವಿ-ಶಕ್ತಿ ಪ್ರಸಾದ್ ದಂಪತಿಗೆ ಮೂವರು ಮಕ್ಕಳು, ಅವರೇ ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ, ಅಮ್ಮಾಜಿ ಕುಮಾರ್.ಅಮ್ಮಾಜಿ ಕುಮಾರ್ ಮಕ್ಕಳು ಧ್ರುವ ಸರ್ಜಾ, ಚಿರಂಜೀವಿ ಸರ್ಜಾ.

ಬೆಂಗಳೂರಿನಲ್ಲಿ ಮಗಳ ಮನೆಯಲ್ಲಿಯೇ ಲಕ್ಷ್ಮೀ ದೇವಿ ಇದ್ದರು. ಲಕ್ಷ್ಮೀ ದೇವಿ ಅವರ ಅನಾರೋಗ್ಯದ ವಿಚಾರ ತಿಳಿದು ಚೆನ್ನೈನಿಂದ ಅರ್ಜುನ್ ಸರ್ಜಾ ಕುಟುಂಬ ಬೆಂಗಳೂರಿಗೆ ಬಂದಿದೆ. ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಅಜ್ಜಿ ನಿಧನದ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!