ಸುಳ್ಯ ತಾಲೂಕಿನ ತೊಡಿಕಾನ, ಗೂನಡ್ಕ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಭೂಮಿ ಕಂಪಿಸಿದೆ. ಇಂದು ಬೆಳಗ್ಗೆ 10:08ರ ಸುಮಾರಿಗೆ ತಾಲೂಕಿನ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ.

ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ಹೇಳಿದ್ದಾರೆ. ಈ ಸದ್ದು ಹಾಗೂ ಕಂಪನವು ಅರಂತೋಡು, ಸಂಪಾಜೆ, ಗೂನಡ್ಕ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಅನುಭವಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.

ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಭೂಮಿ ಕಂಪಿಸಿದೆ. ಸುಮಾರು 10ಕ್ಕೂ ಅಧಿಕ ಬಾರಿ ಇದುವರೆಗೆ ಭೂಮಿ ಕಂಪಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!