ಉಡುಪಿ : ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಸಿ ರೈಲು ಸುಟ್ಟು ಹಾಕಿದವರು ಯಾರು ಕೂಡ ಸೈನ್ಯ ಸೇರುವವರಲ್ಲ. ಸೈನ್ಯ ಸೇರದವರು ಮತ್ತು ದೇಶಭಕ್ತಿ ಬಗ್ಗೆ ಮಾತನಾಡದವರು ಈ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಸೈನ್ಯದ ವಿಚಾರದಲ್ಲಿ ಹಿಂದಿನಿಂದಲೂ ಸೈನಿಕರಿಗೆ ಕಲ್ಲು ಹೊಡೆಯುವುದು ಮತ್ತು ಸೈನಿಕರಿಗೆ ಕಲ್ಲು ಹೊಡೆದಾಗ ಎಲ್ಲ ಪಕ್ಷದವರು ಮೌನ ವಾಗಿರುವು ದನ್ನು ನಾವು ಕಾಶ್ಮೀರದಿಂದ ಕನ್ಯಾರಿಕುಮಾರಿವರೆಗೆ ಹಲವು ಸಂದರ್ಭದಲ್ಲಿ ನೋಡಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಹೈಸ್ಕೂಲ್ ಶಿಕ್ಷಣದಲ್ಲಿಯೇ ಸೈನ್ಯವನ್ನು ಒಂದು ಪಾಠವಾಗಿ ಕಲಿಸಲಾಗುತ್ತದೆ. ಆ ಮೂಲಕ ಅಲ್ಲಿನ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.

ಅದೇ ರೀತಿ ನಮ್ಮ ಯುವಕರು ನಾಲ್ಕು ವರ್ಷ ಅಗ್ನಿವೀರ್‌ಗಳಾದರೆ ದೇಶದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ ಮತ್ತು ಹಳ್ಳಿಗೆ ಮರಳಿದ ಬಳಿಕ ತಾವು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ಜನರಿಗೂ ಶಿಸ್ತು ಕಳುಹಿ ಸುತ್ತಾರೆ. ಈ ಮೂಲಕ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆದರೆ ಇದೆಲ್ಲವೂ ವಿರೋಧ ಪಕ್ಷಗಳಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಕೇವಲ ಓಟು ಬ್ಯಾಂಕ್ ರಾಜಕಾರಣ ಮಾತ್ರ. ಅದಕ್ಕಾಗಿ ಸಮಾಜ ಕೆಟ್ಟ ದಾರಿಯಲ್ಲಿಯೇ ಸಾಗಬೇಕೆಂದು ವಿರೋಧ ಪಕ್ಷಗಳು ಬಯಸುತ್ತಿವೆ ಎಂದು ಅವರು ದೂರಿದರು.

ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ಹಿನ್ನೆಲೆಯಲ್ಲಿ ಮೋದಿ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಲು ಯೋಜನೆ ರೂಪಿಸಿದ್ದಾರೆ. ಅದರ ಭಾಗವಾಗಿ ಅಗ್ನಿಪಥ್ ಯೋಜನೆ ಜಾರಿಗೆ ತರಲಾಗಿದೆ. ಆಸಕ್ತರು ಮಾತ್ರ ತಮ್ಮ ತಂದೆತಾಯಿಯ ಒಪ್ಪಿಗೆ ಪಡೆದುಕೊಂಡು ಇದಕ್ಕೆ ಸೇರಬಹುದಾಗಿದೆ. ಯಾರನ್ನು ಒತ್ತಾಯ ಮಾಡುವುದಿಲ್ಲ. ಆ ಮೂಲಕ ದೇಶದಲ್ಲಿ ಯುವ ಸೈನಿಕರ ತಂಡ ರಚಿಸಲು ಸಾಧ್ಯವಾಗುತ್ತದೆ. ಮುಂದೆ ಅವರಿಗೆ ಪೊಲೀಸ್ ಇಲಾಖೆಯ ಉದ್ಯೋಗದಲ್ಲೂ ಆದ್ಯತೆ ದೊರೆಯಲಿದೆ ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ಅನಾವಶ್ಯಕ ಗೊಂದಲ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಕೃಷಿ ಮಸೂದೆಯ ವಿಚಾರ ದಲ್ಲೂ ವಿದೇಶಿ ಷಡ್ಯಂತರಿಗಳ ಜೊತೆ ಸೇರಿ ಕೊಂಡು ಅನಾವಶ್ಯಕ ಗೊಂದಲ ಸೃಷ್ಠಿಸಲಾಗಿತ್ತು. ಈ ಮೂಲಕ ನಮ್ಮ ದೇಶಕ್ಕೆ ತೊಂದರೆ ಕೊಡಲು ಕೆಲವರು ವ್ಯವಸ್ಥಿತ ಷಡ್ಯಂತರ ಮಾಡುತ್ತಿದ್ದಾರೆ. ಇದು ಕೂಡ ಆ ವ್ಯವಸ್ಥಿತದ ಭಾಗವಾಗಿದೆ ಎಂದು ಅವರು ಆರೋಪಿಸಿದರು.

By admin

Leave a Reply

Your email address will not be published. Required fields are marked *

error: Content is protected !!