ಮಂಗಳೂರು, ಶಾಸಕ ಯು.ಟಿ.ಖಾದರ್ ನೇತೃತ್ವದಲ್ಲಿ ಮುಡಿಪು ಬ್ಲಾಕ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಮತ್ತು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ರವರನ್ನೊಳಗೊಂಡ ಬ್ಲಾಕ್ ಕಾಂಗ್ರೆಸ್ ನಿಯೋಗವು ಮುಡಿಪು ಬ್ಲಾಕ್ ವ್ಯಾಪ್ತಿಯ ಪಜೀರು, ಕೈರಂಗಳ, ಕುರ್ನಾಡು ವ್ಯಾಪ್ತಿಗೊಳಪಟ್ಟು ಕಾರ್ಯನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಸಂಸ್ಥೆಯಾದ ಇನ್ಫೋಸಿಸ್ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡಿ ಉದ್ಯೋಗ, ಅಭಿವೃದ್ಧಿಯ ವಿಷಯದ ಮೇಲೆ ಚರ್ಚಿಸಿ ಕಂಬ್ಲಪದವು-ಮುಡಿಪು ವರೆಗಿನ ರಸ್ತೆಯ ನಿರ್ಮಾಣ ಮೂಲಕ ಉತ್ತಮ ಮೂಲಭೂತ ಸೌಕರ್ಯ ಹಾಗೂ ಊರಿನ ಸೌಂದರ್ಯೀಕರಣಕ್ಕೆ ಕಾರಣರಾದ ಇನ್ಫೋಸಿಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಲು, ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಲೈಬ್ರರಿ ಮತ್ತು ಇನ್ನಿತರ ಸಾರ್ವಜನಿಕ ಸೇವೆಗಳನ್ನು ಸಂಸ್ಥೆಯು ಆದ್ಯತೆಯ ಮೇರೆಗೆ ಪ್ರಾಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕಂಬ್ಲಪದವು-ಮುಡಿಪು ಮುಖ್ಯರಸ್ತೆ ನಿರ್ಮಾಣ ಸಂದರ್ಭದಲ್ಲಿ ರಸ್ತೆ ವಿಭಾಜಕದಲ್ಲಿ ಅಳವಡಿಸಿದ ದಾರಿದೀಪಗಳ ನಿರ್ವಹಣೆಯ  ವೆಚ್ಚವನ್ನು ಸ್ಥಳೀಯ ಸಂಸ್ಥೆಯು ಭರಿಸಬೇಕಾಗಿದ್ದು, ಆದರೆ ಸ್ಥಳೀಯ ಸಂಸ್ಥೆಯ ಸೀಮಿತ ಅನುದಾನದಲ್ಲಿ ಅನಾನುಕೂಲವಾದ ಕಾರಣದಿಂದ ದಾರಿದೀಪಗಳು ಉರಿಯದೆ ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಾಗ ಸಂಸ್ಥೆಯ ಅಧಿಕಾರಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹಲವು ವರ್ಷಗಳಿಂದ ಬಗೆಹರಿಯದೆ ಇರುವ ಸಮಸ್ಯೆಯನ್ನು ದಾರಿದೀಪಗಳ ನಿರ್ವಹಣೆ ಜವಾಬ್ದಾರಿಯನ್ನು  ಇನ್ಫೋಸಿಸ್ ಸಂಸ್ಥೆಯು ಭರಿಸುವ ಸಾದ್ಯತೆಯ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇನ್ಫೋಸಿಸ್ ಅಧಿಕಾರಿಗಳು ಸಂಸ್ಥೆಗೆ ಸಂಪರ್ಕ ಕಲ್ಪಿಸಿಸುವ ತೊಕ್ಕೊಟ್ಟು ಕುತ್ತಾರ್ ನಾಟೆಕಲ್  ಚತುಷ್ಪಥ ರಸ್ತೆ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಾಸಕ ಯು.ಟಿ.ಖಾದರ್ ಇವರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ಹಂತದಲ್ಲಿ ನಡೆಯಲಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ಕಂಬಳಪದವು ತನಕ ವಿಸ್ತರಿಸಬೇಕೆಂದು ಕೋರಿದರು.

By admin

Leave a Reply

Your email address will not be published. Required fields are marked *

error: Content is protected !!