ವಾಷಿಂಗ್ಟನ್, ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಿರಂತರ ದಾಳಿ ನಡೆಯುತ್ತಿದೆ ಎಂದು ಅಮೇರಿಕಾ ರಕ್ಷಣಾ ಇಲಾಖೆ ವರದಿ ಮಾಡಿದೆ. 2021ನೇ ವರ್ಷದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಲ್ಪ ಸಂಖ್ಯಾತರ ಮೇಲೆ ದಾಳಿ ಮುಂದುವರೆದಿದೆ. ಹತ್ಯೆ, ಹಲ್ಲೆ ಮತ್ತು ದಾಳಿ ನಿರಂತರವಾಗಿದೆ ಎಂದು ವರದಿ ಮಾಡಿದೆ.

ಅಮೆರಿಕ ಕಾಂಗ್ರೆಸ್‍ಗೆ ಸಲ್ಲಿಸಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ವರದಿಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ. ರಕ್ಷಣಾ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಅವರು ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿ ಮತ್ತು ಉಲ್ಲಂಘನೆಗಳ ಕುರಿತ ಈ ವರದಿಯಲ್ಲಿ ಪ್ರತ್ಯೇಕವಾದ ಅಧ್ಯಾಯವಿದೆ ಎಂದು ಹೇಳಿದೆ. ಪ್ರತಿ ದೇಶಗಳ ಬಗ್ಗೆ ಪ್ರತ್ಯೇಕ ಅಧ್ಯಾಯ ಇದೆ.

ಭಾರತ ಈ ಮೊದಲು ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ವರದಿಯನ್ನು ತಿರಸ್ಕರಿಸಿತ್ತು. ದೇಶದ ಸಂವಿಧಾನಾತ್ಮ ವಾಗಿ ರಕ್ಷಿಸಲಾದ ಹಕ್ಕುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ವಿದೇಶಿ ಸರ್ಕಾರಗಳಿಗೆ ಹಕ್ಕು ಇಲ್ಲ ಎಂದು ಭಾರತ ಹೇಳಿತ್ತು.

ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಯಾವುದೇ ಅಭಿಪ್ರಾಯವನ್ನು ವರದಿ ವ್ಯಕ್ತಪಡಿಸಿಲ್ಲ. ಆದರೆ ಭಾರತದ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ಆಯಾಮಗಳ ಬಗೆಗಿನ ದಾಖಲೆಗಳು ಮತ್ತು ಭಾರತದ ಸರ್ಕಾರಿ ವರದಿಗಳನ್ನು ಉಲ್ಲೇಖಿಸಲಾಗಿದೆ. ದಾಳಿಗಳ ವಿಚಾರದಲ್ಲಿ ಸರ್ಕಾರೇತರ ಸಂಸ್ಥೆಗಳ ಆರೋಪಗಳನ್ನು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳ ಹೇಳಿಕೆಗಳೂ ವರದಿಯಲ್ಲಿ ನೀಡಲಾಗಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಕೈಗೊಂಡ ತನಿಖೆಯ ಫಲಿತಾಂಶಗಳ ಬಗ್ಗೆ ಮತ್ತು ಸರ್ಕಾರದ ಸ್ಪಂದನೆ ಬಗ್ಗೆ ಯಾವುದೇ ವಿವರ ನೀಡಿಲ್ಲ.

“ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಹತ್ಯೆ, ಹಲ್ಲೆ ಮತ್ತು ದಾಳಿಗಳು ವರ್ಷವಿಡೀ ನಡೆದಿವೆ. ಇದರಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ಹಿಂದೂಯೇತರರ ಮೇಲೆ ನಡೆದ ದಾಳಿಗಳೂ ಸೇರಿವೆ ಎಂದು ಭಾರತದ ಬಗೆಗಿನ ವಿವರದಲ್ಲಿ ಹೇಳಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!