ಮಂಗಳೂರು : ಮೇ. 27 ರಂದು ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ ಡಿಪಿಐ ಪಕ್ಷದ ಜನಾಭಿಪ್ರಾಯ ಕಾರ್ಯಕ್ರಮದಲ್ಲಿ ಭಾಗವಹಿಸುವ ವೇಳೆ ಪೊಲೀಸರನ್ನು ನಾಯಿಗಳೆಂದು ನಿಂದನೆ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಟೂ ವಿಲರ್, ಒಂದು ಕಾರ್ ನಲ್ಲಿ 11 ಮಂದಿಯ ತಂಡ ಪಡೀಲ್ ಕಣ್ಣೂರು ನಡುವಿನ ರಸ್ತೆಯಲ್ಲಿ ಅಜಾಗರೂಕತೆಯ ಚಾಲನೆ ಹಾಗೂ ಚೆಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿಗಳ ಮೈಮೇಲೆ ವಾಹನ ಹಾಯಿಸುವ ಪ್ರಯತ್ನ ಮಾಡಿದ್ದರು ಎಂದು ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ಸಿ ಪಡೆಯಲು ಈ ವಿಡಿಯೋ ಮಾಡಿ ಪೊಲೀಸರಿಗೆ ನಿಂದಿಸಿದ್ದಾರೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಒಂದು ವಿಡಿಯೋದಲ್ಲಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ಹಾಗೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈಗಾಗಲೇ ನಾಲ್ಕು ಮಂದಿ ಆಶ್ರಯ ನೀಡಿದವರು ಸೇರಿ ಆರು ಮಂದಿಯನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ. ಜೊತೆಗೆ ಬೆಂಗಳೂರಿನ ಆಶ್ರಯ ನೀಡಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪತ್ತೆಗಾಗಿ ೧೮೦ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ತಪಾಸಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನದ ವೇಳೆ ಪರಾರಿಗೆ ಯತ್ನಿಸಿದ ಆರೋಪಿಗಳಿಂದ ಮೊಬೈಲ್ ಮತ್ತು ವಾಹನ ವಶಕ್ಕೆ ಪಡೆಯಲಾಗಿದೆ. ಇನ್ನೂ ಈ ಪ್ರಕರಣದಲ್ಲಿ ೯ ಕ್ಕೂ ಹೆಚ್ಚು ಆರೋಪಿಗಳನ್ನು ಬಂಧನವಾಗಲಿದೆ. ಆರೋಪಿಗಳಿಗೆ ಸಹಕರಿಸಿದವರನ್ನು ಪಟ್ಟಿ ಮಾಡಲಾಗಿದ್ದು ಶೀಘ್ರವಾಗಿ ಬಂಧನ ಮಾಡಲಾಗುತ್ತೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!