ಮಂಗಳೂರು: ಪೊಲೀಸರನ್ನು ನಾಯಿಗಳೆಂದು ನಿಂದಿಸಿದವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್‌ ಜನಾಧಿಕಾರ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ಈ ಘೋಷಣೆ ಕೂಗಿದ್ದ.

ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸಿದ ವೀಡಿಯೋ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಕಂಕನಾಡಿ ನಗರ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಾಗಿ ಶೋಧ ನಡೆಯುತ್ತಿದೆ. ಈ ಬಗ್ಗೆ 6 ಮಂದಿಯ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.

ಎಸ್.ಡಿ.ಪಿ.ಐ ಪಕ್ಷವು ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ಬಂದೋಬಸ್ತ್ ಬಗ್ಗೆ ಕೊಡೆಕ್ಕಲ್ ಕಣ್ಣೂರು ಬ್ಯಾರಿಕೆಡ್ ಚೆಕ್ ಪೋಸ್ಟ್ ನಲ್ಲಿ ನಾಲ್ವರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್ ನ ಸವಾರ ಹಾಗೂ ಸಹ ಸವಾರ, ಸ್ಕೂಟರ್ ನ ಸವಾರ ಹಾಗೂ ಸಹಸವಾರ ಮತ್ತು ಕಾರ್ ನಲ್ಲಿದ್ದ  ಸವಾರ ಹಾಗೂ ಇತರರು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ,

”ಪೋಡಾ ಪುಲ್ಲೆ ಪೊಲೀಸೆ”. “ನಾಯಿಂಡೆ ಮೋನೆ ಪೊಲೀಸೆ” ಎಂದು ನಿಂದಿಸಿ ಪರಾರಿಯಾಗಿದ್ದಾರೆ. ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಎ.ಎಸ್.ಐ ಚಂದ್ರಶೇಖರ್ ಅವರು ನೀಡಿದ ದೂರಿನ ಆಧಾರದಲ್ಲಿ ಐ.ಪಿ. ಸೆಕ್ಷನ್ 143, 353, 504, 149 ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!