ಬಿಹಾರ : 500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕನ ಮೃತದೇಹ ಅನುಮಾನಾಸ್ಪದವಾಗಿ ಬಿಹಾರದ ಗಯಾ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದೆ.

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಮಾವೋವಾದಿ ಸಂಘಟನೆಯ  ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ (55)  ಬಿಹಾರದ ಗಯಾ ಜಿಲ್ಲೆಯಲ್ಲಿ ಮೃತದೇಹ ಪತ್ತೆಯಾಗಿದೆ.


ಬಿಹಾರ, ಜಾರ್ಖಂಡ್, ಚತ್ತೀಸ್ ಗಢ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಜಾರ್ಖಂಡ್ ಸೇರಿದಂತೆ 6 ರಾಜ್ಯಗಳಲ್ಲಿ 500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕನ ಶವ  ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಆತನ ಮೇಲೆ 84 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಪೊಲೀಸರು ಯಾದವ್ ಸಾವನ್ನು ದೃಢಪಡಿಸಿದ್ದು, ಬಬುರಾಮ್ ದಿಹ್ ಗ್ರಾಮದಲ್ಲಿ ಶವ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ನಕ್ಸಲರ ಪ್ರಭಾವ ಹೆಚ್ಚಾಗಿದೆ.  ಮಾವೋವಾದಿಗಳ ನಾಯಕನ ಪುತ್ರ ಸೋನು ಕುಮಾರ್ ತಂದೆಯ ಶವವನ್ನು ಗುರುತಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!