Tag: Court

ಮಹಿಳೆಗೆ ಕಿರುಕುಳ ನೀಡಿದಾತ ಕೋರ್ಟ್ ಗೆ ಶರಣು

ಮಾಲ್‌ವೊಂದರಲ್ಲಿ ವ್ಯಕ್ತಿಯೋರ್ವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ವತ: ಕೋರ್ಟ್ ಮುಂದೆ ಶರಣಾಗತಿ ಆಗಿದ್ದಾನೆ. ಅಶ್ವಥ್ ನಾರಾಯಣ್ (60) ನ್ಯಾಯಾಲಯದ ಮುಂದೆ ಶರಣಾದ ಆರೋಪಿ. ಮಾಲ್‌ವೊಂದರಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದು, ಯಶವಂತ್ ಎಂಬವರು ಅದನ್ನು ವಿಡಿಯೋ ಮಾಡಿದ್ದರು.…

ವಿಟ್ಲ: ಜೈಲಿಗೆ ಕಳುಹಿಸುವ ಬದಲು ಅಂಗನವಾಡಿ ಕ್ಲೀನಿಂಗ್ ಕೆಲಸ ನೀಡಿ ತೀರ್ಪುಕೊಟ್ಟ ಕೋರ್ಟ್-ಕರಾವಳಿಯಲ್ಲಿ ಅಪರೂಪದ ಮಾನವೀಯ ಸನ್ನಿವೇಶ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನಿವಾಸಿ ಐತಪ್ಪ ನಾಯ್ಕ ಅವರದ್ದು ಬಡ ಕುಟುಂಬ. 2008ರಲ್ಲಿ ಜಾಗದ ವಿಚಾರದಲ್ಲಿ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ಮಾಡಿದ್ದರು. ಪ್ರಕರಣದಲ್ಲಿ ಬಂಟ್ವಾಳದ ಕೋರ್ಟ್, ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ…

ಪ್ರತಿಭಾ ಕುಳಾಯಿ ಅವಹೇಳನ ಮಾಡಿದ್ದ ಕಹಳೆ ನ್ಯೂಸ್ ನ‌ ಶ್ಯಾಮ ಸುದರ್ಶನ್ ಭಟ್ ಗೆ ನಿರೀಕ್ಷಣಾ ಜಾಮೀನು

ಮಂಗಳೂರು : ಸುರತ್ಕಲ್ ಟೋಲ್ ವಿರೋಧಿಸಿ ಹೋರಾಟ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿ ಶ್ಯಾಮ ಸುದರ್ಶನ ಭಟ್‌ಗೆ ಕೋರ್ಟ್ ನ.9ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಕೆ.ಆರ್.…

ಬಂಟ್ವಾಳ : ರಾಜಕೀಯ ವ್ಯಕ್ತಿಗಳ ಬಗ್ಗೆ ಪ್ರಚೋದನಕಾರಿ ಬರಹ – ವಾಮದಪದವಿನ ಪದ್ಮನಾಭ್ ಗೆ ನ್ಯಾಯಾಂಗ ಬಂಧನ

ಪುಂಜಾಲಕಟ್ಟೆ: ರಾಜಕೀಯ, ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ವೈಯಕ್ತಿಕ ಹಾಗೂ ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಸಹಿತ ಸುಳ್ಳು ಬರಹದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದ ಆರೋಪದಲ್ಲಿ ವಾಮದಪದವು ನಿವಾಸಿಯೋರ್ವರಿಗೆ ಬಂಟ್ವಾಳ ತಾಲೂಕು ದಂಡಾಧಿಕಾರಿ ಡಾ. ಸ್ಮಿತಾರಾಮು ಅವರು ನ್ಯಾಯಾಂಗ ಬಂಧನ…

ಕೋರ್ಟ್ ಜನರ ಬಳಿ ಬರುತ್ತೆ- ಹೀಗೂ ಇದೆ ನಮ್ಮ ನ್ಯಾಯಾಂಗ ವ್ಯವಸ್ಥೆ- ಈ ಕಥೆ ಓದಿದ್ರೆ ನಿಮಗೂ ಅಚ್ಚರಿಯಾಗುತ್ತೆ!

ಉಡುಪಿ, ನ್ಯಾಯಾಲಯದ ಮೆಟ್ಟಿಲು ಹತ್ತಲಾಗದೇ ರಿಕ್ಷಾದಲ್ಲಿ ಕುಳಿತಿದ್ದ ಹಿರಿಯ ವೃದ್ದೆಯೊಬ್ಬರಿಗೆ ನ್ಯಾಯಾಧೀಶರೇ ರಿಕ್ಷಾದ ಬಳಿ ಬಂದು ಆಲಿಸಿದ ಘಟನೆ ಉಡುಪಿಯಲ್ಲಿ ಶನಿವಾರ ನಡೆದಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 25-06-2022 ರಂದು ಉಡುಪಿ,…

ದೇವಸ್ಥಾನದ ಆಸ್ತಿ ಕಬಳಿಕೆ ಆರೋಪ-ತಹಶೀಲ್ದಾರ್ ಗೆ ಜಾಮೀನು ರಹಿತ ವಾರಂಟ್

ಬೆಂಗಳೂರು, ಜೂ.23: ದೇವಸ್ಥಾನದ ಜಾಗ ಕಬಳಿಕೆ ಸಂಬಂಧ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಮತ್ತೊಮ್ಮೆ 25 ಸಾವಿರ ದಂಡ ವಿಧಿಸಿ ಜಾಮೀನು ಸಹಿತ ಬಂಧನ…

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರವೀಣ್ ಭಟ್ ಗೆ ಹೈಕೋರ್ಟ್ ನಿಂದ ನಿರ್ದೋಷಿಯೆಂದು ತೀರ್ಪು

ಬೆಳಗಾವಿ: ತಾಯಿ-ಇಬ್ಬರು ಮಕ್ಕಳ ಕೊಲೆ ‌ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್​ನ ಧಾರವಾಡ ಪೀಠ ತೀರ್ಪು ನೀಡಿದೆ. ಜೂನ್ 21 ರಂದು ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜೀವಾವಧಿ ಶಿಕ್ಷೆಯ ಆದೇಶವನ್ನ ತಿರಸ್ಕರಿಸಿ ಹೈಕೋರ್ಟ್​  ನಿರ್ದೋಷಿ…

ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಬಾಲಕಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ – ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬಟ್ಟೆ ಅಂಗಡಿಯಲ್ಲಿ ಕೆಲಸದಲ್ಲಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-೨ ನ್ಯಾಯಾಲಯವು ೧೦ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಅಬ್ದುಲ್ ಲತೀಫ್ (45)…

ಉಡುಪಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ – ಆರೋಪಿಗೆ ಅಜೀವ ಕಾರಾಗೃಹ ಶಿಕ್ಷೆ

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಅಜೀವ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಪಶ್ಚಿಮ ಬಂಗಾಳ ಮೂಲದ ರಾಜೀಬ್…

ಮಳಲಿ ಮಸೀದಿ ವಿವಾದ – ವಿಚಾರಣೆ ಮತ್ತೆ ಜೂನ್ 14ಕ್ಕೆ ಮುಂದೂಡಿಕೆ

ಮಂಗಳೂರಿನ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟಂತೆ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಾದ ಆಲಿಸಿ ಜೂನ್ 14ಕ್ಕೆ ವಿಚಾರಣೆ ಮುಂದೂಡಿದೆ. ಮಳಲಿಯಲ್ಲಿರೋದು ಮಸೀದಿ ಅಂತ ಮತ್ತೆ ಸಾಬೀತು…

error: Content is protected !!