ಬಂಟ್ವಾಳ : ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಪೊಲೀಸರು ಶುಕ್ರವಾರ ಭೇಟಿ ನೀಡಿದ್ದು, ಮಹತ್ತರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕೆಜೆಹಳ್ಳಿ, ಡಿಜೆಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಹಾಲ್ನ ಟ್ರಸ್ಟಿಯೋರ್ವನನ್ನು ಬಂಧಿಸಿ, ಸ್ಥಳಮಹಜರು ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ಅಯೂಬ್ ಎಂದು ಗುರುತಿಸಲಾಗಿದ್ದು, ಇನ್ನೋರ್ವ ಟ್ರಸ್ಟಿ ತಲೆಮರೆಸಿಕೊಂಡಿದ್ದಾನೆಂದು ಹೇಳಲಾಗಿದೆ.
ಪಿಎಫ್ ಐ ಹಾಗೂ ಸಿಎಫ್ ಐ ನ ಕಾರ್ಯಕ್ರಮಗಳಿಗೆ ಇದೇ ಹಾಲ್ ಆಸರೆಯಾಗುತ್ತಿದ್ದು, ಜಿಲ್ಲೆಯಲ್ಲಿ ನಡೆದಿರುವ ಹಲವು ಘಟನೆಗಳ ಆರೋಪಿಗಳಿಗೂ ಈ ಹಾಲ್ ಗೂ ನಂಟು ಇರುವ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ಈ ನಡುವೆ ಶುಕ್ರವಾರ ಎಎನ್ಐ ಹಾಲ್ ನಲ್ಲಿ ತನಿಖೆ ನಡೆಸಿದ್ದು, ನಿಷೇಧಿತ ಸಂಘಟನೆಗೆ ಸೇರಿರುವ ಹಾಲ್ ಆಗಿರುವ ಕಾರಣಕ್ಕೆ ಹಾಲ್ ಅನ್ನು ಸೀಜ್ ಮಾಡಲು ಎನ್ಐಎ ಸೂಚನೆ ನೀಡಿದ್ದು ಒಂದೆರಡು ದಿನಗಳಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.