ಬಸ್ನ ಸ್ಟೆಪ್ಗೆ ಕಾಲಿಟ್ಟು ಮೇಲೆ ಹೋಗುವ ಸಂದರ್ಭದಲ್ಲಿಯೇ, ಬಸ್ ಚಾಲಕ ಬಸ್ಸನ್ನು ಚಾಲನೆ ಮಾಡಿದ್ದು, ಆಗ ಅಯ ತಪ್ಪಿದ ವಿದ್ಯಾರ್ಥಿನಿ ಬಸ್ಸಿನಿಂದ ಕೆಳಗೆ ಬಿದ್ದಿರುವ ಘಟನೆ ಮೂಡುಬಿದಿರೆಯ ವಿದ್ಯಾಗಿರಿ ಬಳಿ ನಡೆದಿದೆ. ಅಯ ತಪ್ಪಿದ ವಿದ್ಯಾರ್ಥಿನಿ ಬಸ್ಸಿನಿಂದ ಕೆಳಗೆ ಬಿದ್ದಿದ್ದು ಬಸ್ಸಿನ ಚಕ್ರದಿಂದ ಸ್ವಲ್ಪದರಲ್ಲೆ ತಪ್ಪಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕೆಳಗೆ ಬಿದ್ದ ವಿದ್ಯಾರ್ಥಿನಿಯನ್ನು ತಕ್ಷಣ ಅಲ್ಲಿದ್ದವರು ಮೇಲೆ ಎತ್ತಿದ್ದು, ಆ ಕೂಡಲೇ ಬಸ್ ಚಾಲಕ ಕೂಡ ಬಸ್ ನಿಲ್ಲಿಸಿದ್ದ. ಬಳಿಕ ಅಲ್ಪಸ್ವಲ್ಪ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.