Month: January 2023

ಬೆಳ್ತಂಗಡಿ: ಹಟ್ಟಿಯಲ್ಲಿ ದನ ತಿವಿದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ದನ ತಿವಿದು ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗುಂಡೂರಿ ಗ್ರಾಮದ ದರಿಕಂಡ ನಿವಾಸಿ ಸದಾನಂದ ಪೂಜಾರಿ ಅವರ ಪತ್ನಿ ಮೋಹಿನಿ ಯಾನೆ ಪ್ರೇಮ (45) ಮೃತಪಟ್ಟಿದ್ದಾರೆ. ಹಟ್ಟಿಯಲ್ಲಿ ಮೇವು ಹಾಕುತ್ತಿದ್ದಾಗ ಅನಿರೀಕ್ಷಿತವಾಗಿ ದನ ತಿವಿದು ಮೋಹಿನಿ…

ಮನೆ ಶೌಚಾಲಯದಲ್ಲಿ ವಿದ್ಯಾರ್ಥಿನಿ ಆಫೀಫಾ ನಿಗೂಢ ಸಾವು

ವಿದ್ಯಾರ್ಥಿನಿಯೋರ್ವಳು ಮನೆಯ ಶೌಚಾಲಯದೊಳಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕಳಿಯಾ ಗ್ರಾಮದಲ್ಲಿ ಜನವರಿ 28ರ ಶನಿವಾರ ನಡೆದಿದೆ. ಕಣಿಯೂರು ಗ್ರಾಮದ ಕಜೆ ಮನೆ ನಿವಾಸಿ ಅಬ್ದುಲ್‌ ರಜಾಕ್‌ ಅವರ ಪುತ್ರಿ ಆಫೀಫಾ (16) ಸಾವನ್ನಪ್ಪಿದ ಬಾಲಕಿ. ಕಳಿಯಾ ಗ್ರಾಮದ ಐಮನ್‌ ಆರ್ಕೆಡ್‌ನ‌ಲ್ಲಿರುವ ಹಸೈನಾರ್‌…

ವಿಟ್ಲ: ಫೆ. 5ರಂದು ಎರುಂಬು ಎಸ್.ಎನ್.ಟಿ. ಫ್ರೆಂಡ್ಸ್ ವತಿಯಿಂಡ ಕಬಡ್ಡಿ ಪಂದ್ಯ ಆಯೋಜನೆ

ವಿಟ್ಲ, ಇಲ್ಲಿಗೆ ಸಮೀಪದ ಎರುಂಬು ಎಂಬಲ್ಲಿ ಎಸ್.ಎನ್.ಟಿ. ಫ್ರೆಂಡ್ಸ್ ವತಿಯಿಂದ ಫೆಬ್ರವರಿ 5 ರಂದು ಎರುಂಬು ಶ್ರೀ ಶಂಕರ ನಾರಾಯಣ ದೇವಸ್ಥಾನದ ವಠಾರದಲ್ಲಿ 55 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 6000/- ರೂ. ಹಾಗೂ ಟ್ರೋಫಿ, ದ್ವಿತೀಯ…

ವಿಟ್ಲ: ಖಿನ್ನತೆಗೆ ಒಳಗಾಗಿ ಮಹಿಳೆ ಶಾಲಿನಿ ಆತ್ಮಹತ್ಯೆ

ವಿಟ್ಲ,  ಖಿನ್ನತೆಗೆ ಒಳಗಾದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ತೋಡ್ಲ ನಿವಾಸಿ ದಿ. ಕರುಣಾಕರ ಪೂಜಾರಿ ಯವರ ಪತ್ನಿ ಶಾಲಿನಿ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶಾಲಿನಿ ಅವರ ಪತಿ ಕೆಲ ವರ್ಷಗಳ ಹಿಂದೆ ಕೀಟನಾಶಕ ಸೇವಿಸಿ…

ನಾಳೆ ರವಿವಾರ ಮಾಣಿಲ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

29/01/2023 ಭಾನುವಾರಮಾಣಿಲ ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ.1.ಬಾಳೆಕಾನ-ಬಟ್ಯಡ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ.10 ಲಕ್ಷ.2.ಬಾಳೆಕಾನ-ಬಟ್ಯಡ್ಕ ರಸ್ತೆ ಯ ಕಾಂಕ್ರೀಟೀಕರಣ ಉದ್ಘಾಟನೆ -15ಲಕ್ಷ.3.ಪಕಳಕುಂಜ-ಮೈಂದಮೂಲೆ-ಬಟ್ಯಡ್ಕ ಕಾಂಕ್ರೀಟೀಕರಣ ಶಿಲಾನ್ಯಾಸ -10ಲಕ್ಷ.4.ತಾರಿದಳ-ನಾಣೀಲು-ಕಕ್ವೆ ರಸ್ತೆ ಕಾಂಕ್ರೀಟೀಕರಣ ಶಿಲಾನ್ಯಾಸ. 10 ಲಕ್ಷ.5.ಅರಳ್ತಡ್ಕ-ದೇಲಂತ್ತಡ್ಕ ರಸ್ತೆ ಕಾಂಕ್ರೀಟೀಕರಣ ಶಿಲಾನ್ಯಾಸ 20…

ಮಂಗಳೂರು: ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಬರ್ಬರ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಕಾಪಿಕಾಡ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಪತಿಯೊಬ್ಬ ಹಾಸಿಗೆ ಹಿಡಿದಿದ್ದ ತನ್ನ ಪತ್ನಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಮೃತರನ್ನು ಶೈಲಜಾ (64) ಮತ್ತು ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ದಿನೇಶ್ ರಾವ್ (65) ಎಂದು ಗುರುತಿಸಲಾಗಿದೆ. ಶೈಲಜಾ…

ಬಸ್ ನಿಂದ ಎಸೆಯಲ್ಪಟ್ಟು ಟಯರ್ ನಡಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು

ಬಸ್ ಫೂಟ್ ಬೋರ್ಡ್ ಮೇಲೆ ನಿಂತು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಖಾಸಗಿ ಬಸ್ ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಹೆಮ್ಮಾಡಿ ಸಮೀಪದ‌ ಕಟ್ ಬೇಲ್ತೂರು ನಿವಾಸಿ,…

ಅನುಗ್ರಹ ಕಾಲೇಜಿನಲ್ಲಿ ಎಪ್ಪತ್ತನಾಲ್ಕನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಣೆ

ಬಂಟ್ವಾಳ, ಜ. 26: ಇಲ್ಲಿಗೆ ಸಮೀಪದ ಕಲ್ಲಡ್ಕ, ಗೋಳ್ತಮಜಲುವಿನಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 74ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಬಿ.ಡಿ ರವರು ಧ್ವಜಾರೋಹಣ ನೆರವೇರಿಸಿ ನಾವು ಸಂವಿಧಾನದ ಮೂಲಭೂತ ಹಕ್ಕುಗಳನ್ನು ನಮ್ಮ…

ಎಪ್ಪತ್ತನಾಲ್ಕನೇ ಗಣ ರಾಜ್ಯೋತ್ಸವವನ್ನು ಸಂಭ್ರಮಿಸಿದ ಎಸ್. ಎಂ. ಆರ್. ಪಬ್ಲಿಕ್ ಸ್ಕೂಲ್

ಬಂಟ್ವಾಳ, ಜ.26: ಇಲ್ಲಿಗೆ ಸಮೀಪದ ಮಾರ್ಣಬೈಲು ಎಂಬಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಸ್. ಎಂ. ಆರ್. ಪಬ್ಲಿಕ್ ಸ್ಕೂಲ್ ನಲ್ಲಿ ಎಪ್ಪತ ನಾಲ್ಕನೇ ಗಣರಾಜ್ಯೋತ್ಸವನ್ನು ರಾಷ್ಟ್ರ ಧ್ವಜಾರೋಹಣದೊಂದಿಗೆ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾನವ ಸಂಪನ್ಮೂಲದ ನಿರ್ದೇಶಕರಾದ…

ವಯರಿಂಗ್ ಕೆಲಸದ ವೇಳೆ ಮೇಲ್ಛಾವಣಿಯಿಂದ ಬಿದ್ದು ಯುವಕ ವರುಣ್ ಸಾವು

ಕೆಲಸದಲ್ಲಿ ನಿರತನಾಗಿದ್ದ ವೇಳೆ ಆಕಸ್ಮಿಕವಾಗಿ ವರ್ಕ್‌ಶಾಪ್‌ವೊಂದರ ಮೇಲ್ಛಾವಣಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಸಂಭವಿಸಿದೆ. ನಗರದ ಎಕ್ಕೂರುಗುಡ್ಡೆ ನಿವಾಸಿ ವರುಣ್‌(25) ಮೃತಪಟ್ಟವರು. ವರುಣ್‌ ಅವರು ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ವರ್ಕ್‌ಶಾಪ್‌ನ ಮೇಲ್ಛಾವಣಿಯ ಶೀಟ್‌…

error: Content is protected !!